ಔರಾದ್ ತಾಲೂಕಿನ ಸಂತಪೂರ ಗ್ರಾಮದ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಯೊಬ್ಬರು ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ಎಂ.ಎ. ಕನ್ನಡ ಹಾಗೂ ಬಿಇಡ್ ಪದವಿ ಪಡೆದ ಸತೀಷ ನರಸಿಂಗ್ ಹಸನ್ಮುಖಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
ಸಂತಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತಪೂರ ಗ್ರಾಮದ ವಾರ್ಡ್-2ರ ಗ್ರಾ.ಪಂ.ಸದಸ್ಯ ಮರಣದಿಂದ ತೆರುವಾದ ಸಾಮಾನ್ಯ ಸ್ಧಾನಕ್ಕೆ ನ.23ರಂದು ನಡೆದ ಉಪಚುನಾವಣೆ ನಡೆದಿತ್ತು. ನಾಲ್ಕು ಜನ ಸ್ಪರ್ಧಿಸಿದ್ದರು. ಒಟ್ಟು 658 ಮತದಾನವಾಗಿತ್ತು. ಅದರಲ್ಲಿ ಸತೀಷ್ 202 ಮತ ಪಡೆದು 34 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

‘ಇತ್ತೀಚೆಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವೆ. ಈಗಾಗಲೇ ನೆಟ್, ಜೆಆರ್‌ಎಫ್ ಪರೀಕ್ಷೆ ಪಾಸು ಮಾಡಿದ್ದೇನೆ. ಕೆಲ ತಿಂಗಳ ಕಾಲೇಜಿನಲ್ಲಿ ಪಾಠ ಮಾಡಿದ್ದೇನೆ. ಮುಂದೆ ಪಿಎಚ್‌ಡಿ ಮಾಡುವ ಕನಸಿದೆ. ಗ್ರಾಮ ಪಂಚಾಯತ್ ಸದಸ್ಯನಾಗಬೇಕು ಎಂದು ಬಯಸಿರಲಿಲ್ಲ.ಈಗ ಹೆಚ್ಚುಕಮ್ಮಿ ಒಂದು ವರ್ಷದ ಅವಧಿ ಮಾತ್ರ ಇದೆ. ಪದವೀಧರ ಯುವಕ ಎಂಬ ಕಾರಣಕ್ಕೆ ಗ್ರಾಮಸ್ಥರು, ಸ್ನೇಹಿತರು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದರು. ನನ್ನ ಅವಧಿಯಲ್ಲಿ ಸಾಧ್ಯವಾದಷ್ಟು ಉತ್ತಮ ಕಾರ್ಯ ಮಾಡಬೇಕು ಎಂದಿರುವೆʼ ಎಂದು ನೂತನ ಗ್ರಾ.ಪಂ.ಸದಸ್ಯ ಸತೀಷ ಹಸನ್ಮುಖಿ ಈದಿನ.ಕಾಮ್‌ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ಅಣ್ಣ-ತಂಗಿ ಅಬ್ಬರ; ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ
ಈ ಸಂದರ್ಭದಲ್ಲಿ ಔರಾದ್ ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಸಂತಪೂರ ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ಅಭಿನಂದನೆಗಳು