ಹಾಸನ ನಗರದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಮೇ 23ರಂದು ಶುಕ್ರವಾರ ವಿದ್ಯುತ್ ವ್ಯತ್ಯಯ ಆಗಲಿದೆ.
66/11 ಕೆ.ವಿ ಬಾಳುಪೇಟೆ ಮತ್ತು ಹೆತ್ತೂರು ವಿ.ವಿ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿ ಕೊಂಡಿರುವುದರಿಂದ, ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ಯವರೆಗೆ 66/118.2 ಬಾಳ್ಳುಪೇಟೆ ಮತ್ತು ಹೆತ್ತೂರು ವಿ.ವಿ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಆಗುವ ಪ್ರದೇಶಗಳ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ ಜಿಲ್ಲೆಯಲ್ಲಿ ಯುವಕ-ಯುವತಿ ಹೃದಯಾಘಾತದಿಂದ ಸಾವು
ಈ ಕುರಿತು ಸಾರ್ವಜನಿಕರು ಸಹಕರಿಸುವಂತೆ ಕ ವಿ ಪ್ರ ನಿ ನಿ, ಹಾಸನ ಕಾರ್ಯಾಚರಣೆಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.