ಎಚ್.ಡಿ. ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ, ತನಿಖೆಗೆ ಹಾಜರಾಗುವಂತೆ ಆರೋಪಿಗಳಾದ ರೇವಣ್ಣ ಮತ್ತು ಪ್ರಜ್ವಲ್‌ಗೆ ನೋಟಿಸ್ ನೀಡಿತ್ತು. ಆದರೂ, ತನಿಖೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.
ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ‘ಎ1’ ಆರೋಪಿಯಾಗಿದ್ದು, ಗುರುವಾರ ಎಸ್‌ಐಟಿ ಮುಂದೆ ಹಾಜರಾಗುವ ಸಾಧ್ಯತೆಗಳಿವೆ. ತಮ್ಮ ನಿವಾಸದಲ್ಲಿ ಹೋಮ ಮಾಡಿಸಿರುವ ರೇವಣ್ಣ, ದೇವರ ಮೊರೆ ಹೋಗಿದ್ದು, ಬೆಂಗಳೂರಿಗೆ ಬಂದಿದ್ದಾರೆ.
“ಎಸ್‍ಐಟಿ ತಂಡ ಮನೆಗೆ ನೋಟಿಸ್ ಅಂಟಿಸಿದ್ದಾರೆ. ತನಿಖೆಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತೇವೆ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲವನ್ನೂ ಎದುರಿಸುತ್ತೇನೆ” ಎಂದು ರೇವಣ್ಣ ಹೇಳಿದ್ದಾರೆ.
ಇನ್ನು, ಆರೋಪಿ ಪ್ರಜ್ವಲ್ ಜರ್ಮನಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಎಸ್‌ಐಟಿ ನೋಟಿಸ್ ನೀಡಿದರೂ, ವಿಚಾರಣೆ ಹಾಜರಾಗದ ಆರೋಪಿ, “ನಾನು ವಿದೇಶದಲ್ಲಿರುವುದರಿಂದ ನನ್ನ ವಕೀಲರ ಮೂಲಕ ಎಸ್ಐಟಿ ಬಳಿ ಕಾಲಾವಕಾಶ ಕೇಳಿದ್ದೇನೆ. 7 ದಿನ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಎಸ್‌ಐಟಿ ತಂಡ ತನಿಖೆಯನ್ನು ತೀವ್ರಗೊಳಿಸಿದ್ದು, ಮಂಗಳವಾರ ಹಾಸನದಲ್ಲಿ ಸಂತ್ರಸ್ತೆಯರನ್ನು ಭೇಟಿ ಮಾಡಿದೆ. ವಿಚಾರಣೆಗೆ ಸಹಕರಿಸುವಂತೆ ಕೋರಿದೆ. ಆದರೆ, ತನಿಖೆಗೆ ಸಹಕರಿಸಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೆನ್‌ಡ್ರೈವ್ ವಿಚಾರವಾಗಿ ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್‌ನ ಮಾಜಿ ಕಾರು ಡ್ರೈವರ್ ಕಾರ್ತಿಕ್, ತಾನು ಬಿಜೆಪಿ ಮುಖಂಡ ದೇವರಾಜೇಗೌಡಗೆ ಮಾತ್ರವೇ ವಿಡಿಯೋಗಳನ್ನು ನೀಡಿದ್ದೇನೆ. ಬೇರೆ ಯಾರಿಗೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಪೆನ್‌ಡ್ರೈವ್‌ಗಳು ಪತ್ತೆಯಾಗದೆ ಪ್ರಜ್ವಲ್ ರೇವಣ್ಣ ಒಬ್ಬರೇ ಆರೋಪಿ ಎಂದು ಹೇಳಲಾಗಿತ್ತು. ಆದರೆ, ಈ ಕೃತ್ಯಗಳಲ್ಲಿ ಮಾಜಿ ಸಚಿವ ರೇವಣ್ಣ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಓರ್ವ ಸಂತ್ರಸ್ತೆ ರೇವಣ್ಣ ಅವರನ್ನೇ ಎ1 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಿದ್ದಾರೆ.
ಯಾವುದೇ ವ್ಯಕ್ತಿ ಆರೋಪಿ ಅಂತ ಗೊತ್ತಾಗುತ್ತಿರುವಾಗಲೇ ಪೊಲೀಸ್ರು ಆರೋಪಿಗಳನ್ನು ಒದ್ದು ಒಳಗೆ ಹಾಕ್ತಾರೆ. ಅದ್ರೆ ಹೆಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಎ1 ಹಾಗು ಎ2 ಆರೋಪಿಗಳಾದ್ರೂ ಏಕೆ ಪೊಲೀಸ್ರು ಒದ್ದು ಒಳಗೆ ಹಾಕ್ತಿಲ್ಲ. ಬಡವರಿಗೆ ಒಂದು ಉಳ್ಳುವರಿಗೆ ಒಂದು ಕಾನೂನೇ… ಈ ತಾರತಮ್ಯ ಏಕೆ..
ಯಾವುದೇ ವ್ಯಕ್ತಿ ಆರೋಪಿ ಅಂತ ಗೊತ್ತಾಗುತ್ತಿರುವಾಗಲೇ ಪೊಲೀಸ್ರು ಆರೋಪಿಗಳನ್ನು ಒದ್ದು ಒಳಗೆ ಹಾಕ್ತಾರೆ. ಅದ್ರೆ ಹೆಚ್.ಡಿ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಎ1 ಹಾಗು ಎ2 ಆರೋಪಿಗಳಾದ್ರೂ ಏಕೆ ಪೊಲೀಸ್ರು ಒದ್ದು ಒಳಗೆ ಹಾಕ್ತಿಲ್ಲ. ಬಡವರಿಗೆ ಒಂದು ಉಳ್ಳುವರಿಗೆ ಒಂದು ಕಾನೂನೇ… ಈ ತಾರತಮ್ಯ ಏಕೆ..ಬಡ ಹೆಣ್ಣುಮಕ್ಕಳು ಅಂದ್ರೆ ಈ ಬೋಳಿ ಮಕ್ಕಳಿಗೆ ತಮ್ಮ ಇಷ್ಟ ಪೂರೈಸಿಕೊಳ್ಳು ಅಗ್ಗದ ವಸ್ತುಗಳಾಗಿಬಿಟ್ಟಿವೆ….