ಪತ್ರಿಕೋದ್ಯಮ ಮೌಲ್ಯಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ನವ ಮಾದ್ಯಮಗಳು ಬಹಳಷ್ಟು ವೇಗವಾಗಿ ಜನರಿಗೆ ಸುದ್ದಿ ತಲುಪಿಸುತ್ತವೆ. ಆದರೆ, ಪತ್ರಿಕೆಗಳು ಪೈಪೋಟಿ ಮಧ್ಯೆ ನೈಜತೆಯನ್ನು ಪ್ರತಿಪಾದಿಸಿ ಜನ ಮನ್ನಣೆ ಪಡೆದುಕೊಂಡಿವೆ. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದನಣ್ಣವರ ತಿಳಿಸಿದ್ದಾರೆ.
ಹುಬ್ಬಳ್ಳಿಯ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ, ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮತ್ತೋರ್ವ ಪತ್ರಕರ್ತ ಜಾವೇದ್ ಅಧೋನಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸವಾಲುಗಳು ಬಹಳಷ್ಟಿದೆ. ಎಲ್ಲವನ್ನೂ ಧನಾತ್ಮಕವಾಗಿ ಪರಿಗಣಿಸಬೇಕು ಸುದ್ದಿಗಳಿಗೆ ಹೊಸ ರೂಪ ನೀಡುವ ಜೊತೆಗೆ ಜನರಿಗೆ ಮುಟ್ಟುವಂತೆ ಸುದ್ದಿ ಮಾಡುವ ಕಲೆಯನ್ನು ಯುವ ಪತ್ರಕರ್ತರು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಮ್. ಮಕಾಂದಾರ, ಐಕ್ಯೂಎಸಿ ಕೋಆರ್ಡಿನೆಟರ್ ಏನ್.ಬಿ.ನಾಲತವಾಡ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್ ಅಧೋನಿ, ಉಪನ್ಯಾಸಕರಾದ ರೇಷ್ಮಾ ದೇಸಾಯಿ ಸೇರಿದಂತೆ ಹಲವರು ಇದ್ದರು.