ಬೀದರ್‌ | ಪ್ರತಿವರ್ಷ ʼಬಸವ ಉತ್ಸವʼ ಆಚರಿಸಲು ಬಸವಪರ ಸಂಘಟನೆಗಳ ಆಗ್ರಹ

Date:

Advertisements

ನಾಡಿನ ಪರಂಪರೆ ಮತ್ತು ಇತಿಹಾಸ ಜನಸಾಮಾನ್ಯರಿಗೆ ಮುಟ್ಟಿಸಲು ಕರ್ನಾಟಕ ಸರ್ಕಾರ ಅನೇಕ ಉತ್ಸವಗಳನ್ನು ಮಾಡುತ್ತ ಬಂದಿದೆ. ಅದರಂತೆ ಬಸವ ಉತ್ಸವವು 2009-10ನೇ ಸಾಲಿನಿಂದ ಪ್ರಾರಂಭಿಸಿದೆ. ಆದರೆ ಪ್ರತಿವರ್ಷ ಬಸವ ಉತ್ಸವ ಆಚರಿಸುತ್ತಿಲ್ಲ ಎಂದು ಸರ್ಕಾರದ ನಡೆಯನ್ನು ಬಸವಪರ ಸಂಘಟನೆಗಳ ಪ್ರಮುಖರು ಖಂಡಿಸಿದರು.

ಬಸವಲ್ಯಾಣದ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಪ್ರೊ.ಸಿ.ಬಿ ಪ್ರತಾಪೂರೆ ಅವರು ಮಾತನಾಡಿ, “ಸರ್ಕಾರ ಒಂದು ಕಡೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ್ದಾರೆ. ಇನ್ನೊಂದು ಕಡೆ ಬಸವ ಉತ್ಸವ ಆಚರಿಸಲು ನಿಷ್ಕಾಳಜಿವಹಿಸುತ್ತಿರುವುದು ಖಂಡನೀಯವಾಗಿದೆ” ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಪ್ರೊ. ಎಸ್.ಜೆ ಕರಣೆ ಮಾತನಾಡಿ “ಸರ್ಕಾರ ಮೈಸೂರು ಉತ್ಸವ, ಹಂಪಿ ಉತ್ಸವ ಪ್ರತಿ ವರ್ಷ ಆಚರಿಸುತ್ತದೆ. ಅದರಂತೆ ಬಸವ ಉತ್ಸವವು ಸಹ ಪ್ರತಿ ವರ್ಷ ಆಚರಿಸಬೇಕು. ಈ ವರ್ಷ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದಕ್ಕೆ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ ಬಸವ ಉತ್ಸವವನ್ನು ವಿಶ್ವ ಮಟ್ಟದ ಉತ್ಸವವಾಗಿ ಬಸವಕಲ್ಯಾಣದಲ್ಲಿ ಪ್ರತಿ ವರ್ಷ ಆಚರಿಸುವಂತೆ ಸರ್ಕಾರ ಮುಂಬರುವ ಬಜೆಟನಲ್ಲಿ ಘೋಷಿಸಿ, ಅದಕ್ಕೆ 15 ಕೋಟಿಗೂ ಅಧಿಕ ಹಣವನ್ನು ಮೀಸಲಿಡುವ ಮುಖಾಂತರ ಬಸವ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು” ಎಂದು ಆಗ್ರಹಿಸಿದರು.

Advertisements

ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ ಮನವಿ ಪತ್ರ ಓದಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬಸವಕಲ್ಯಾಣ ಸಹಾಯಕ ಆಯುಕ್ತರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವಕಲ್ಯಾಣ ಗ್ರೇಡ-2 ತಹಸೀಲ್ದಾರ್ ರಮೇಶ ಬಾಬು ಇದ್ದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ರಾಜ್ಯ ಬಜೆಟ್‌ನಲ್ಲಿ ಕೃಷಿ ಕೂಲಿಕಾರರ ಬೇಡಿಕೆ ಘೋಷಣೆಗೆ ಆಗ್ರಹ

ಈ ಸಂದರ್ಭದಲ್ಲಿ ಪ್ರಮುಖರಾದ ಜಗನ್ನಾಥ ಪತಂಗೆ, ಪ್ರೊ.ಎ.ಡಿ ಪಾಟೀಲ, ಶಾಮರಾವ ಸಿಂಗ್‌, ಶ್ರೀಶೈಲ ಹುಡೆದ, ಬಾಬುರಾವ ಗೌಡಗಾಂವೆ, ಮಹಾದೇವಪ್ಪ ಇಜಾರೆ, ಗಣಪತಿ ಕಾಸ್ತೆ, ಜೈಪ್ರಕಾಶ ಸದಾನಂದೆ, ಬಸವಣಪ್ಪ ನೆಳಗಿ, ಸತ್ಯಕ್ಕ ತಾಯಿ ಸೇರರಿದಂತೆ ಇತರರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X