“ಕೌಟುಂಬಿಕ ಹಾಗೂ ಸಮಾಜಿಕ ಸಮಸ್ಯೆಗಳೇ ಶಾಲೆಯಿಂದ ದೂರ ಉಳಿಯಲು ಕಾರಣವಾಗಬಾರದು” ಎಂದು ಪ್ರಪಂಚದ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಎಂಬ ಹೆಗ್ಗಳಿಕೆ ಪಾತ್ರರಾದ ಬಾಬರ ಅಲಿ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷ ಗೃಹದಲ್ಲಿ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಬಡತನ, ಅನಕ್ಷರತೆ ಹಾಗೂ ಪೋಷಕರ ಅಜ್ಞಾನದಿಂದ ಮಕ್ಕಳು ಶಿಕ್ಷಣದಿಂದ ದೂರು ಉಳಿಯುವ ಕಂಡು ಬರುತ್ತಿದೆ. ಬದುಕು ರೂಪಿಸುವ ಹಾಗೂ ಅನ್ನ ನೀಡುವ ಪ್ರಾಯೋಗಿಕ ಶಿಕ್ಷಣ ನೀಡುವ ವ್ಯವಸ್ಥೆಯಿಂದ ಆಗಬೇಕು ಅಂದಾಗ ಮಾತ್ರ ಎಲ್ಲರಿಗೂ ಶಿಕ್ಷಣ ಸಿಗಬಹುದು ಎಂದರು.
ಮಕ್ಕಳನ್ನು ಶಾಲೆಗೆ ಕರೆತರುವ ನಿಟ್ಟಿನಲ್ಲಿ ತಂದೆ ತಾಯಿಯರ ಸಹಕಾರದಿಂದ ಹಿಂದುಳಿದ ವರ್ಗಗಳ, ವಲಸೆ ಕಾರ್ಮಿಕರ, ಬೀದಿ ಬದಿಯ ವ್ಯಾಪಾರಿಗಳ ಹಾಗೂ ಶೋಷಿತ ಸಮುದಾಯದ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸ ಮಾಡಲಾಯಿತು ಎಂದು ತಿಳಿಸಿದರು.
ಸಮಸ್ಯೆಗಳೇ ಮಕ್ಕಳಿಗೆ ಶಾಲೆಯಿಂದ ದೂರು ಉಳಿಯುವುದಕ್ಕೆ ಅಡೆತಡೆ ಉಂಟಾಗಬಾರದು ಎಂಬ ಉದ್ದೇಶದಿಂದ ಮಕ್ಕಳು ಮೊದಲು ಶಾಲೆಯತ್ತ ಆಕರ್ಷಿತರಾಗಲಿ. ನಿತ್ಯ ಬರುವಂತೆ ರೂಢಿಗೊಳಿಸಿ ಆನಂತರವಷ್ಟೇ ಮಕ್ಕಳಿಗೆ ಕಲಿಕೆ ಒತ್ತು ನೀಡಿದರಾಯಿತು. ಮಕ್ಕಳ ಹಾಜರಾತಿಯೇ ಶಿಕ್ಷಣ ಮಟ್ಟ ಸುಧಾರಣೆಗೆ ಕಾರಣವಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ 2009ರಲ್ಲಿ ತನ್ನ ಹದಿನಾರನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಮುಖ್ಯ ಶಿಕ್ಷಕ ಎಂದು ಖ್ಯಾತರಾದ ಬಾಬರ್ ಅಲಿ 8 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ವಿಶ್ವಖ್ಯಾತಿ ಪಡೆದಿದ್ದಾರೆ. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ,ಅವರ ಜೀವನಕ್ಕೆ ದಾರಿದೀಪವಾದ ಬಾಬರ್ ಅಲಿ ಅವರ ಜೀವನ ಸಾಧನೆಯನ್ನು ಶಿಕ್ಷಕರು ಅರಿತು ಪ್ರೇರಣೆ ಪಡೆದು ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.
ಬಿಇಒ ಚಂದ್ರಶೇಖರ ಭಂಡಾರಿ, ಎನ್ ಬಿ.ರಂಗಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಬಾರಿ ಉಪ ನಿರ್ದೇಶಕ ಸೋಮಶೇಖರ ಹೊಕ್ರಾಣಿ, ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಸಂಚಾಲಕ ಸೈಯದ್ ಹಫಿಜುಲ್ಲಾ ಉಪಸ್ಥಿತರಿದ್ದರು.
