ಆಸ್ತಿ ವಿವಾದ: ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿʼಯ ಕೊಲೆ

Date:

ಮಡಿಕೇರಿಯಲ್ಲಿ ವಿಚಾರಣಾಧೀನ ಕೈದಿಯನ್ನು ಹಳೆಯ ದ್ವೇಷದ ಕಾರಣ ಚಾಕುವಿನಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ರಾಜೇಶ್ ಎಂಬಾತ ಹೇಮಂತ್‌ ಎಂಬ ಕೈದಿಯ ಎದೆ ಮತ್ತು ಹೊಟ್ಟೆಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ, ತೀವ್ರ ರಕ್ತಸ್ರಾವಕ್ಕೆ ಒಳಗಾದ ಹೇಮಂತ್‌ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ 25 ವರ್ಷದ ಮೃತ ಹೇಮಂತ್‌ ವಿಚಾರಾಣಾಧೀನ ಕೈದಿಯಾಗಿದ್ದರು. ಜೂನ್‌ 1 ರಂದು ರಾಜೇಶ್‌ ಮತ್ತು ಹೇಮಂತ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ಮಾತಿಗೆ ನಿಲ್ಲದೆ ದೈಹಿಕ ಹಲ್ಲೆಯ ಮಟ್ಟಕ್ಕೆ ತಲುಪಿದೆ, ಈ ವೇಳೆ ರಾಜೇಶ್‌ ಹೇಮಂತ್‌ ಹೊಟ್ಟೆ, ಬೆನ್ನು ಮತ್ತು ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಚಿಕಿತ್ಸೆಗೆಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್‌ ಆಸ್ಪತ್ರೆಗೆ ಸಾಗಿಸಲಾದರೂ ತೀವ್ರವಾಗಿ ಗಾಯಗೊಂಡಿದ್ದ ಹೇಮಂತ್‌ ಮಂಗಳವಾರ ಕೊನೆಯುಸಿರೆಳಿದಿದ್ದಾರೆ.

ಘಟನೆ ಕಾರಾಗೃಹದ ಅಡುಗೆಮನೆಯ ಸಮೀಪ ನಡೆದಿದ್ದು , ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಕೃತ್ಯ ನಡೆದಿದೆ ಎನ್ನಲಾಗಿದೆ. ರಾಜೇಶ್‌ 2024 ರಿಂದ ಕೊಲೆ ಅಪರಾಧದಲ್ಲಿ ಬಂಧಿತರಾಗಿದ್ದರು. ಹೇಮಂತ್‌ 2026ರ ಮೇ ತಿಂಗಳಿನಲ್ಲಿ ಕೊಲೆ ಪ್ರಯತ್ನದ ಆರೋಪದ ಮೇಲೆ ಬಂಧಿತರಾಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಇಬ್ಬರೂ ಸಂಬಂಧಿಕರಾಗಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಎರಡು ಕುಟುಂಬದ ನಡುವೆ ವೈ಼ಷಮ್ಯ ಬೆಳೆದಿತ್ತು, ರಾಜೇಶ್‌ ಸಹೋದರನ ಮೇಲೆ ಹೇಮಂತ್‌ ಆಸ್ತಿ ಗಲಾಟೆಯ ವೇಳೆ ಹಲ್ಲೆ ನಡೆಸಿದ್ದ, ಈ ಪ್ರಕರಣದ ಸಂಬಂಧ ಹೇಮಂತ್‌ ತಂದೆ ತಾಯಿಯೂ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ಬಂಧಿತರಾಗಿದ್ದಾರೆ.

ಕೃತ್ಯಕ್ಕೆ ಹಳೆಯ ದ್ವೇಷವೇ ಕಾರಣವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ರಾಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಅವ್ಯವಸ್ಥೆ ಕುರಿತು ತನಿಖೆಗೆ ವಿಶೇಷ ತಂಡ ರಚಿಸಲು ಆಗ್ರಹ

ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಕಾರ್ಮಿಕೆ ಶ್ರೀಮಂತಿನಿ ಮೃತಪಟ್ಟಿದ್ದಾರೆ...

ಚಿಂತಾಮಣಿ | ಸಿದ್ದರಾಮಯ್ಯ ವೈಯಕ್ತಿಕ ಚಾರಿತ್ರ್ಯವಧೆ ಮಾಡುವ ಸಣ್ಣತನ ನಮಗಿಲ್ಲ: ಪ್ರತಾಪ್ ಸಿಂಹ

ನಗರದ ಪಾಲಿಟೆಕ್ನಿಕ್ ಮೈದಾನದ ಮಾತಾ ಭಾರತಿ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ದಸರಾ...

ಆರ್‌ಎಸ್‌ಎಸ್‌ ಕೇವಲ ಪುರುಷರಿರುವ ‘ಸಂವಿಧಾನ ವಿರೋಧಿ’ ಸಂಘಟನೆ: ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ...

ಅ.23ರಂದು ‘ಊರೂರೂ ಜಂತರ್ ಮಂತರ್’ ಉಡುಪಿಯಲ್ಲೂ ಪ್ರತಿಭಟನೆ ಮತ್ತು ಜಾಥಾ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಮತದಾರರ...