ಈ ದಿನ ಸಂಪಾದಕೀಯ | ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್

Date:

'ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ. ಅದು ತಾಯಿಗೆ ಸಮಾನʼ ಎಂದ ಯೋಗಿಯ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ. ಗೋವು ಕುರಿತ ದ್ವಂದ್ವ ನಿಲುವು ಬಯಲಾಗಿದೆ. ಆಡುವುದು ಒಂದು ಮಾಡುವುದು ಇನ್ನೊಂದು ಎನ್ನುವುದಕ್ಕೆ ಬಿಜೆಪಿ ಬ್ರ್ಯಾಂಡ್ ಆಗಿದೆ.

‘ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ. ಅದು ತಾಯಿಗೆ ಸಮಾನʼ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಯೋಗಿ ಹೀಗೆ ಹೇಳಲು ಕಾರಣವೂ ಇದೆ. 2027ಕ್ಕೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯನ್ನು ಬಿಜೆಪಿ ಗೆಲ್ಲಬೇಕಾಗಿದೆ. ಗೆಲ್ಲುವುದಕ್ಕಾಗಿ ಅದೇ ಹಳೆಯ ಅಸ್ತ್ರವಾದ ಹಿಂದೂ-ಮುಸ್ಲಿಂ ದ್ವೇಷವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಬೇಕಿದೆ. ಹಾಗೆ ಕೊಂಡೊಯ್ಯಲು ಬೇಕಾದ ಹಲವು ಹತಾರುಗಳಲ್ಲಿ ಗೋವು ಕೂಡ ಒಂದಾಗಿದೆ. ಹೀಗಾಗಿ ಗೋವು ಈಗ ತಾಯಿ ಆಗಿ ಅವತಾರ ತಾಳಿದೆ.

- Advertisement -

ಅಸಲಿಗೆ, 2014ರ ಹಿಂದಕ್ಕೆ, ನಮ್ಮ ದೇಶದಲ್ಲಿ ಗೋವು ಒಂದು ಸಾಧಾರಣ ಸಾಕು ಪ್ರಾಣಿಯಾಗಿತ್ತು. ಹಬ್ಬ-ಹರಿದಿನಗಳಲ್ಲಿ ಮಾತ್ರ ಪೂಜಿಸಲ್ಪಡುತ್ತಿತ್ತು. ರೈತರ ಬದುಕಿನ ಭಾಗವಾಗಿತ್ತು. ಉಳುವುದಕ್ಕೆ, ಹಾಲು-ಮೊಸರಿಗೆ, ಗೊಬ್ಬರಕ್ಕೆ ಬಳಕೆಗೆ ಬರುತ್ತಿತ್ತು. ಅದಕ್ಕೆ ವಯಸ್ಸಾದಾಗ, ಅದನ್ನು ಸಾಕುವುದು ಕಷ್ಟವಾದಾಗ, ಮಾರುವುದು ಮಹಾಪರಾಧವಾಗಿರಲಿಲ್ಲ. ಅದನ್ನು ತಮ್ಮ ಮುಖ್ಯ ಆಹಾರವನ್ನಾಗಿಸಿಕೊಂಡಿದ್ದ ಮುಸ್ಲಿಮರು, ದಲಿತರು, ಕ್ರಿಶ್ಚಿಯನ್ನರು ಅದನ್ನು ಖರೀದಿಸುವುದು ಕೂಡ ಅಪರಾಧವಾಗಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಆದರೆ, 2017ರಲ್ಲಿ ಅಧಿಕಾರಕ್ಕೆ ಬಂದ ಉತ್ತರ ಪ್ರದೇಶದ ಖಾವಿಧಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೋವನ್ನು ಪೂಜಿಸಿ, ಹುಲ್ಲು ತಿನ್ನಿಸಿ, ಮೈದಡವಿದರು. ಅಂದಿನಿಂದ ಗೋವು ಪವಿತ್ರ ಪ್ರಾಣಿಯಾಯಿತು. ಭಾರತೀಯರ ಭಾವನೆ ಜಾಗೃತವಾಯಿತು. ಗೋವಿಗೆ ವಿಶೇಷ ಸ್ಥಾನಮಾನ ಸಿಕ್ಕಿತು. ಅದನ್ನು ಆಹಾರವನ್ನಾಗಿ ಸೇವಿಸುವವರ ಮೇಲೆ ವಿನಾಕಾರಣ ದ್ವೇಷ ಬೆಳೆಯಿತು. ಅಲ್ಲಿಗೆ ಯೋಗಿ ಮತ್ತು ಬಿಜೆಪಿ ಅಂದುಕೊಂಡದ್ದು ಆಗಿತ್ತು. ಚುನಾವಣೆ ಗೆದ್ದು ಅಧಿಕಾರಕ್ಕೇರಿತ್ತು.

ಇದನ್ನು ಓದಿದ್ದೀರಾ?: ಕನಕಪುರದ ಕಲಿಗೆ ‘ಅಹಿಂದ’ ನೆಲೆ ಉಳಿಸಿಕೊಳ್ಳುವ ಅಗ್ನಿಪರೀಕ್ಷೆ!

ಉತ್ತರ ಪ್ರದೇಶ ಬಿಜೆಪಿ ವಶವಾಯಿತು. ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್, ಮುಸ್ಲಿಮರಿಗೆ ತೊಂದರೆ ಕೊಡುವ ಕಾರಣಕ್ಕಾಗಿಯೇ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದರು. ಸರ್ಕಾರವೇ ಮುಂದೆ ನಿಂತು ಗೋ ಶಾಲೆಗಳ ನಿರ್ಮಾಣ, ಗೋ ಸಂರಕ್ಷಣಾ ಯೋಜನೆಗಳನ್ನು ಜಾರಿಗೆ ತಂದಿತು. ಸಾಲದು ಎಂದು, ಸಂಘಪರಿವಾರದ ಗೋ ರಕ್ಷಕರೆಂಬ ಪುಂಡರ ಗುಂಪುಗಳಿಗೆ ಪ್ರೋತ್ಸಾಹ ನೀಡತೊಡಗಿತು. ಕದ್ದುಮುಚ್ಚಿ ಮಾರಾಟ, ಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಮಾರಣಾಂತಿಕ ಹಲ್ಲೆ ಮಾಮೂಲಾಯಿತು. ಬುಲ್ಡೋಜರ್ ನ್ಯಾಯ ಚಾಲ್ತಿಗೆ ಬಂದಿತು. ಹಲ್ಲೆ-ಕೊಲೆ ಕೂಡ ಯೋಗಿ ಆಡಳಿತದಲ್ಲಿ ಸ್ವೀಕೃತವಾಯಿತು. ಇದು ದೇಶದ ಅಲ್ಪಸಂಖ್ಯಾತರಲ್ಲಿ ಅನ್ಯ ಭಾವನೆ ಹುಟ್ಟುಹಾಕಿತು. ಭಯ-ಆತಂಕದಲ್ಲಿ ಬದುಕುವಂತಹ ವಾತಾವರಣ ನಿರ್ಮಿಸಿತು.  

ಇನ್ನು ರೈತರಿಗೆ ಮನೆಯಲ್ಲಿ ಸಾಕುತ್ತಿದ್ದ ದನಗಳಿಂದ ಬರುತ್ತಿದ್ದ ಅಲ್ಪಸ್ವಲ್ಪ ಆದಾಯಕ್ಕೆ ಕತ್ತರಿಬಿತ್ತು. ವಯಸ್ಸಾದ ದನಗಳನ್ನು ಸಾಕುವುದು ಹೊರೆಯಾಯಿತು. ಕೊಳ್ಳುವವರು ಇಲ್ಲದಾಗ ಬೀದಿಗೆ ಬಿಟ್ಟರು. ಈಗ ಉತ್ತರ ಪ್ರದೇಶದ ರಸ್ತೆಗಳಲ್ಲಿ ದನಗಳದೇ ಕಾರುಬಾರು. ಸಂಚಾರಕ್ಕೆ ಅಡ್ಡಿಪಡಿಸುವುದು, ವೃದ್ಧರು-ಮಕ್ಕಳಿಗೆ ಗುಮ್ಮುವುದು ಇಲ್ಲಿ ಮಾಮೂಲು. ಆದರೂ ಅವುಗಳನ್ನು ಹೊಡೆಯುವಂತಿಲ್ಲ, ಅವುಗಳಿಂದಾಗುತ್ತಿರುವ ಅವಘಡಗಳು ಒಂದೆರಡಲ್ಲ. ಆದರೂ ಜನ, ಮುಸ್ಲಿಮರು ಗೋವನ್ನು ಕತ್ತರಿಸುತ್ತಾರೆ, ಸೇವಿಸುತ್ತಾರೆ ಎಂಬ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡರು. ಭಕ್ತರು ಗಂಜಲ ಕುಡಿದು, ಸಗಣಿ ತಿನ್ನತೊಡಗಿದರು.

ಇದು ಬಿಜೆಪಿಗೆ ರಾಜಕೀಯವಾಗಿ ಅನುಕೂಲವಾಗತೊಡಗಿತು. ಇದರಿಂದ ಸ್ಫೂರ್ತಿಗೊಂಡ ಬಿಜೆಪಿ, ತಮ್ಮದೇ ಆಡಳಿತವಿದ್ದ ಗುಜರಾತ್, ಹರಿಯಾಣ, ಕರ್ನಾಟಕ ಹಾಗೂ ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದವು. ಇತ್ತೀಚೆಗಷ್ಟೇ, ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಬಕ್ರೀದ್ ಹಬ್ಬದ ಮುನ್ನ ಪ್ರಾಣಿ ಬಲಿ ಮತ್ತು ಕಸಾಯಿಖಾನೆಗಳನ್ನು ನಿಯಂತ್ರಿಸುವ ಆದೇಶ ಹೊರಡಿಸಿತು.

ಇದಕ್ಕಾಗಿಯೇ ಕಾದು ಕುಳಿತಿದ್ದ ಹಿಂದು ಮಹಾಸಭಾದ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಅಗರ್ವಾಲ್ ಎಂಬಾತ, ಬಕ್ರೀದ್ ಹಬ್ಬದ ನೆಪದಲ್ಲಿ ಗೋ ಹತ್ಯೆ ನಡೆಯಲಿದೆ, ದೇಶಾದ್ಯಂತ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಸಂಪೂರ್ಣ ನಿಷೇಧ ಹೇರಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ.

ಇದೇಕೋ ಅತಿಯಾಗುತ್ತಿದೆ ಎಂದರಿತ ಮುಸ್ಲಿಂ ಸಮುದಾಯ, ‘ನಾವು ಹಬ್ಬದಲ್ಲಿ ದನಗಳ ಹತ್ಯೆ ಮಾಡುವುದಿಲ್ಲ ಮತ್ತು ರೈತರಿಂದ ದನಗಳನ್ನು ಖರೀದಿಸುವುದಿಲ್ಲ’ ಎಂಬ ದೃಢ ನಿರ್ಧಾರ ತಳೆಯಿತು. ಅಷ್ಟೇ ಅಲ್ಲ, ಹಸುಗಳನ್ನು ಮಾರಲು ಬಂದ ಹಿಂದೂ ರೈತರಿಗೆ, ‘ನಿಮ್ಮ ತಾಯಿ ಸ್ವರೂಪ ದನಗಳನ್ನು ನಾವು ಖರೀದಿಸುವುದಿಲ್ಲ’ ಎಂದು ವಾಪಸ್‌ ಕಳಿಸಿದ್ದೂ ಆಯಿತು. ಈ ನೂತನ ಪ್ರತಿಭಟನೆಯು ದೇಶವ್ಯಾಪಿ ವಿಸ್ತರಿಸಿ, ಕರ್ನಾಟಕದ ಹಾಸನದಲ್ಲೂ ಇದು ಪ್ರತಿಧ್ವನಿಸಿತು. ಪರಿಣಾಮವಾಗಿ ರೈತರು ತಮ್ಮ ದನಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಅಟ್ಟಿ, ಜಿಲ್ಲಾಡಳಿತವೇ ಖರೀದಿಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ್ದೂ ಆಯಿತು.

ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋದ, ಮುಸ್ಲಿಂ ಸಮುದಾಯದ ಜಮೀಯತ್ ಉಲೇಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ಮಅದನಿ, ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕೆಂದು ಕರೆ ನೀಡಿದರು. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕೂಡ ದನಿಗೂಡಿಸಿದರು. ಅದಕ್ಕೆ ದೇಶದ ಹಲವು ಮುಸ್ಲಿಂ ಸಂಘಟನೆಗಳು ಬೆಂಬಲಿಸಿದವು.

ಇದೇಕೋ ತಿರುಗುಬಾಣವಾಯಿತಲ್ಲ, 2027ರ ಚುನಾವಣೆಯಲ್ಲಿ ತೊಂದರೆ ಕೊಡಬಹುದಲ್ಲ ಎಂದರಿತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮುಸ್ಲಿಮರ ನಿಲುವಿಗೆ ಪ್ರತಿಕ್ರಿಯಿಸುತ್ತ, ‘ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ. ಅದು ತಾಯಿಗೆ ಸಮಾನʼ ಎಂದು ತಾಯಿಗೆ ತಳಕು ಹಾಕಲು ಹವಣಿಸಿದರು. ಯೋಗಿಯ ಈ ಹೇಳಿಕೆ ಈಗ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ.

ಬಿಜೆಪಿ ತನ್ನದೇ ಆಡಳಿತವಿರುವ ಗೋವಾ, ಮೇಘಾಲಯ, ಮಿಜೋರಾಂ ಹಾಗೂ ನಾಗಾಲ್ಯಾಂಡ್‌ನಂತಹ ರಾಜ್ಯಗಳಲ್ಲಿ ಗೋಮಾಂಸ ಸೇವನೆ ಮತ್ತು ಮಾರಾಟಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಏಕೆಂದರೆ, ಅಲ್ಲಿನ ಬಹುಸಂಖ್ಯಾತರ ಆಹಾರ ಗೋವು. ಅಲ್ಲಿ ಆ ಪದ್ಧತಿಯನ್ನು ಗೌರವಿಸುವ ನೆಪದಲ್ಲಿ ಬಿಜೆಪಿ ಮೌನಕ್ಕೆ ಶರಣಾಗಿದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ರಸಗೊಬ್ಬರ ಕೊರತೆ ಮತ್ತು ಮೋದಿ ಬೋಧನೆ 

ಅಷ್ಟೇ ಅಲ್ಲ, ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಜಾನುವಾರು ಮಾಂಸ ರಫ್ತು ಮಾಡುವ ದೇಶಗಳಲ್ಲಿ ಒಂದಾಗಿದೆ. ದೇಶದ ಪ್ರಮುಖ ಮಾಂಸ ರಫ್ತು ಮಾಡುವ ಕಂಪನಿಗಳ ಮಾಲೀಕರು ಬಿಜೆಪಿಗೆ ಹತ್ತಿರವಿರುವ ಉದ್ಯಮಿಗಳಾಗಿದ್ದಾರೆ. ಅವರು ಪಕ್ಷಕ್ಕೆ ಕೋಟಿಗಟ್ಟಲೆ ನಿಧಿ ನೀಡುವವರಾಗಿದ್ದಾರೆ. ಒಂದು ಕಡೆ ದೇಶದ ಒಳಗಡೆ ಸಣ್ಣ ವ್ಯಾಪಾರಿಗಳು ಮತ್ತು ದಲಿತ-ಅಲ್ಪಸಂಖ್ಯಾತ ಸಮುದಾಯಗಳ ಆಹಾರ ಮತ್ತು ವ್ಯಾಪಾರದ ಹಕ್ಕನ್ನು ಕಸಿದುಕೊಳ್ಳುವ ಬಿಜೆಪಿ, ಇನ್ನೊಂದು ಕಡೆ ದೊಡ್ಡ ಮಟ್ಟದ ರಫ್ತು ಉದ್ಯಮಕ್ಕೆ ಪರೋಕ್ಷವಾಗಿ ಸಹಕರಿಸುತ್ತದೆ.

ಆಡುವುದು ಒಂದು ಮಾಡುವುದು ಇನ್ನೊಂದು ಎನ್ನುವ ದ್ವಂದ್ವಕ್ಕೆ ಬಿಜೆಪಿ ಬ್ರ್ಯಾಂಡ್ ಆಗಿದೆ. ಪ್ರತಿಯೊಂದಕ್ಕೂ ದೇವರು-ಧರ್ಮ-ರಾಷ್ಟ್ರೀಯತೆಯ ಬಣ್ಣ ಹಚ್ಚಿ ದೇಶದ ಜನರನ್ನು ಮೋಸಗೊಳಿಸುತ್ತಲೇ ಸಾಗಿದೆ. ಜನ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ಗೋವು ನಮ್ಮ ಹಕ್ಕು ಎಂದು ಎದೆಯುಬ್ಬಿಸಿ ಹೇಳಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜಧಾನಿ ದೆಹಲಿಗೆ ದಿಗ್ಬಂಧನ- ಸಹಸ್ರಾರು ಯುವಜನರ ಬಂಧನ, ಇದೇನು ತುರ್ತುಪರಿಸ್ಥಿತಿಯೇ?

ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ...

ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ...