ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶನಂತೆ ಒಳಮೀಸಲಾತಿ ಬಗ್ಗೆ ಚಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿ ಮೈಕೊಂಡ ಕ್ಷೇತ್ರದ ಶಾಸಕ ಬಸವಂತಪ್ಪ ಅವರಿಗೆ ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ) ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ದಾವಣಗೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಯಕೊಂಡ ಶಾಸಕ ಸನ್ಮಾನ್ಯ ಶ್ರೀ ಕೆ. ಎಸ್. ಬಸವಂತಪ್ಪ ಅವರನ್ನು ಭೇಟಿ ಮಾಡಿದ ದಸಂಸ ಮುಖಂಡರು, ಮನವಿ ಸಲ್ಲಿಸಿ ಆಗ್ರಹಿಸಿದರು.
“ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ವರ್ಗಿಕರಣದ ಆಗಸ್ಟ್ 1ರಂದು ನೀಡಿರುವ ಸುಪ್ರೀಂ ಕೋರ್ಟ್ ಆದೇಶ ಮೇರೆಗೆ ಒಳಮೀಸಲಾತಿ ಜಾರಿಗೊಳಿಸುವಂತೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕು. ಈ ಮೂಲಕ ಸರ್ಕಾರದ ಗಮನ ಸೆಳೆದು ಶೀಘ್ರ ಸಾಮಾಜಿಕ ನ್ಯಾಯದ ಒಳಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಬಳ್ಳಾರಿ | ನಮ್ಮ ಚರಿತ್ರೆಯನ್ನು ನಾವು ನೆನಪಿಟ್ಟುಕೊಳ್ಳಬೇಕು: ಸಾಹಿತಿ ವಸುಂಧರಾ ಭೂಪತಿ
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ. ಬಿ. ಕೃಷ್ಣಪ್ಪ) ಜಿಲ್ಲಾ ಸಂಚಾಲಕರಾದ ಕುಂದುವಾಡ ಮಂಜುನಾಥ್, ಮುಖಂಡರಾದ ವಿಜಯ ಲಕ್ಷ್ಮೀ, ಕೆ,ಪ್ರದೀಪ್ ಕೆ ಟಿ ಜೆ ನಗರ, ಮಂಜುನಾಥ್ ಆರ್, ವೀರಭದ್ರಪ್ಪ ಬಿ. ಎಚ್ ಹಾಗೂ ಹೆಗ್ಗೆರಿ ರಂಗಪ್ಪ ಮತ್ತು ಇತರ ದಲಿತ ಮುಖಂಡರು ಹಾಜರಿದ್ದರು.
