ತಿಪಟೂರು ಪೊಲೀಸ್ ಉಪಾಧೀಕ್ಷಕರ ವಿರುದ್ದ ಭೀಮ್ ಆರ್ಮಿ ಸಂಘಟನೆಯಿಂದ ಪ್ರತಿಭಟನೆ

Date:

Advertisements

ತಿಪಟೂರು ನಗರದ ದೊಡ್ಡಯ್ಯನಪಾಳ್ಯ ಗ್ರಾಮದ ದಲಿತ ಮಹಿಳೆ ಮೇಲೆ ದೌರ್ಜನ್ಯವಾಗಿದ್ದು ನೊಂದವರ ಪರ ಕೆಲಸ ಮಾಡಬೇಕಾದ ಪೊಲೀಸ್ ಇಲಾಖೆ, ದೌರ್ಜನ್ಯ ನಡೆಸಿದ ವ್ಯಕ್ತಿಗಳ ಪರ ಶಾಮಿಲಾಗಿ ದಲಿತ ಮಹಿಳೆಗೆ ಅನ್ಯಾಯ ಮಾಡಲಾಗಿದೆ, ತಿಪಟೂರು ಪೊಲೀಸ್ ಉಪ ಅಧೀಕ್ಷಕರು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆ ನಡೆಸಿಲ್ಲ. ಪ್ರಕರಣದ ಮರುತನಿಖೆ ನಡೆಸಬೇಕು, ನೊಂದ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಭೀಮ್ ಆರ್ಮಿಯಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರು ಹಾಗೂ ಗೃಹಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಕರ್ನಾಟಕ ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಮತೀನ್ ಕುಮಾರ್ ಮಾತನಾಡಿ ತಿಪಟೂರು ನಗರದ ದೊಡ್ಡಯ್ಯನಪಾಳ್ಯ ಗ್ರಾಮದ ಮಂಜುಳಮ್ಮ ಕೋಂ ಬಸವರಾಜು ಎಂಬುವವರಿಂದ ಹಣಕಾಸಿನ ಸಹಾಯಪಡೆದ ಅದೇ ಗ್ರಾಮದ ರಾಜೇಶ್ ಬಿನ್ ಜಯರಾಮಯ್ಯ ಎಂಬುವವರು ದಲಿತ ಮಹಿಳೆ ಮಂಜುಳಮ್ಮನ ಮೇಲೆ ಜಾತಿದೌರ್ಜನ್ಯ ನಡೆಸಿ,ಕೊಲೆ ಬೆದರಿಕೆ ಹಾಕಿದರು,ನೊಂದ ಮಹಿಳೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಿದರೆ, ಪ್ರಕರಣದ ತನಿಖೆನಡೆಸಿ ಪ್ರಕರಣ ದಾಖಲಿಸದೇ,ದೌರ್ಜನ್ಯ ನಡೆಸಿದ ರಾಜೇಶ್ ಪರವಾಗಿ ವಕಾಲತ್ತು ವಹಿಸಿದ ಪೊಲೀಸರು, ಪ್ರಕರಣ ದಾಖಲಿಸದೆ, ವಾಪಾಸ್ ಕಳಿಸಿದ್ದಾರೆ ಎಂದು ಪ್ರತಿಭಟನೆ ನಿರತರು ಆರೋಪಿಸಿದ್ದಾರೆ.

ದೌರ್ಜನ್ಯದಿಂದ ನೊಂದಮಹಿಳೆ ತುಮಕೂರು ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿಗಳಿಗೆ ದೂರು ನೀಡಿ ಎಸ್ಪಿ ಯವರ ಸೂಚನೆ ಮೇರೆಗೆ ಅಟ್ರಾಸಿಟಿ ಕೇಸ್ ದಾಖಲಿಸಲಾಗಿತ್ತು, ಆದರೆ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ತಿಪಟೂರು ಪೊಲೀಸ್ ಉಪ ಅಧೀಕ್ಷಕರು ,ದಲಿತರ ಮೇಲೆ ದೌರ್ಜನ್ಯ ನಡೆಸಿದ ರಾಜೇಶ್ ಪ್ರಭಾವಕ್ಕೆ ಒಳಗಾಗಿ ಪರಿಶಿಷ್ಠ ದೌರ್ಜನ್ಯ ಪ್ರಕರಣ ನ್ಯಾಯಸಮ್ಮತವಾಗಿ ನಡೆಸದೆ ಅನ್ಯಾಯ ಮಾಡಿದ್ದಾರೆ,ಪ್ರಕರಣದ ಸಾಕ್ಷಿಗಳನ್ನ ಬೆದರಿಸಿ ತಮ್ಮ ಇಚ್ಚೆಯಂತೆ ಹೇಳಿಕೆ ಪಡೆದಿದ್ದಾರೆ, ತಿಪಟೂರು ಡಿವೈಎಸ್ಪಿ ಹಾಗೂ ಅವರ ಕಚೇರಿ ಸಿಬ್ಬಂದಿ ದಲಿತ ವಿರೋಧಿಗಳಾಗಿ ವರ್ತಿಸುತ್ತಿದ್ದು,ಇವರಿಂದ ದಲಿತರು ನ್ಯಾಯ ನಿರೀಕ್ಷೆ ಮಾಡುವುದು,ಕಷ್ಟವಾಗಿದ್ದು, ಡಿವೈಎಸ್ಪಿ ಯವರು ಸಲ್ಲಿಸಿರುವ ದೋಷಾರೋಪಪಟ್ಟಿ ರದ್ದುಗೊಳ್ಳಿ ಬೇರೆ ಅಧಿಕಾರಿಗಳಿಂದ ಪ್ರಕರಣದ ಮರುತನಿಖೆ ನಡೆಸಬೇಕು, ನೊಂದ ದಲಿತ ಮಹಿಳೆ ಮಂಜುಳಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು

Advertisements

ಪ್ರತಿಭಟನೆಯಲ್ಲಿ ಕರ್ನಾಟಕ ಭೀಮ್ ಆರ್ಮಿ,ಮುಖಂಡರಾದ ಪ್ರದೀಪ್,ಕಾನೂನು ಸಲಹೆಗಾರ ರಾಜೀವ್ ಶಾಂಬು,ದರ್ಶನ್ ಪಂಡಿತ್ ಸಿಂಹ, ಭೀಮ್ ಆರ್ಮಿ ಯುವ ಮುಖಂಡ ಮೋಹನ್ ಬಾಬು,ಹರೀಶ್ ಯಗಚೀಕಟ್ಟೆ .ನಾಗ್ತೀಹಳ್ಳಿ ಶಶಿಕುಮಾರ್ .ಕವಿತ ,ಮಂಜುಳ, ಬಸವರಾಜು,ಮುಂತ್ತಾದವರು ಉಪಸ್ಥಿತರಿದರು.

ವರದಿ – ಮಿಥುನ್ ತಿಪಟೂರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X