ಭಾಲ್ಕಿ ತಾಲ್ಲೂಕಿನ ಕಟ್ಟಿ ತೂಗಾಂವ್ ಗ್ರಾಮದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ನಿಗೂಢ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಬೀದರ್ ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿ ಗೃಹ ಸಚಿವರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
ಸಚಿನ್ ಪಾಂಚಾಳ್ ನಿಗೂಢ ಸಾವಿನ ಘಟನೆ ವಿಷಾದನೀಯ. ಬಡ ಕುಟುಂಬದಲ್ಲಿ ಹುಟ್ಟಿದ ಸಚಿನ್ ತನ್ನ ಉಪಜೀವನಕ್ಕಾಗಿ ವ್ಯವಹಾರ ಮಾಡುವಾಗ ಏನೋ ಏರುಪೇರಾಗಿದೆ. ಸಚಿನ್ ಸಾವಿನಿಂದ ಅವರ ಮೇಲೆ ಅವಲಂಬಿತ ಕುಟುಂಬದ ಸದಸ್ಯರು ಬೀದಿ ಪಾಲಾಗುವ ಸ್ಥಿತಿ ಬಂದೊಗಿದೆ. ಇಡೀ ಸಾವಿನ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮೃತ ಸಚಿನ್ ಕುಟುಂಬಸ್ಥರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹೊಟ್ಟೆಯಲ್ಲೇ ಮಗು ಸಾವು; ಚಿಕಿತ್ಸೆ ಫಲಿಸದೆ ತಾಯಿಯೂ ಮರಣ
ಪ್ರತಿಭಟನೆಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ದತ್ತಾತ್ರಿ ವಿಶ್ವಕರ್ಮ, ಮಹಿಳಾ ಘಟಕ ಜಿಲ್ಲಾಧ್ಯಕ್ಷ ಸುಲೋಚನಾ ವಿಶ್ವಕರ್ಮ, ಯುವ ಘಟಕದ ಅದ್ಯಕ್ಷ ಪ್ರಶಾಂತ ವಿಶ್ವಕರ್ಮ, ಮಹಾಸಭಾದ ಉಸ್ತುವಾರಿ ಅಶೋಕ ಪೊದ್ದಾರ್, ಉಪಾಧ್ಯಕ್ಷ ಸೋಮನಾಥ ಪಾಂಚಾಳ್, ರಾಜಕುಮಾರ ಪಾಂಚಾಳ್, ಕೃಷ್ಣಮಚಾರಿ, ಮಹಾದೇವ ಪಾಂಚಾಳ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.