ಕೊಡಗು | ಬಡ ವರ್ಗಕ್ಕೆ ನಿವೇಶನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Date:

Advertisements

ಕೊಡಗು ಜಿಲ್ಲೆ, ಮಡಿಕೇರಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ನೇತೃತ್ವದಲ್ಲಿ ಬಡ ವರ್ಗದ ಜನರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು.

ಕೊಡಗಿನಲ್ಲಿರುವ ಆದಿವಾಸಿ, ಬುಡಕಟ್ಟು, ದಲಿತ, ಶೋಷಿತ ಬಡ ವರ್ಗದ ಕುಟುಂಬಗಳಿಗೆ ನಿವೇಶನವಿಲ್ಲಾ ಹಾಗೇ ಭೂಮಿ ಸಹ ಇಲ್ಲ. ಜಿಲ್ಲಾಡಳಿತ, ಸರ್ಕಾರ, ಜನ ಪ್ರತಿನಿಧಿಗಳು ಮತದ ಸರಕಾಗಿ ಕಂಡರೆ ವಿನಃ ಬಡ ವರ್ಗಕ್ಕೆ ನ್ಯಾಯ ಸಲ್ಲಿಸುವುಲ್ಲಿ ವಿಫಲರಾಗಿದ್ದಾರೆ.

ಅದರಲ್ಲೂ, ಇಲ್ಲಿಯೇ ಹುಟ್ಟಿ ಬೆಳೆದು, ನೆಲ ಮೂಲದವರಾಗಿ ಇರಲು ಜಾಗವಿಲ್ಲ, ಸೂರಿಲ್ಲ, ಸತ್ತರೆ ಹೂಣಲು ಜಾಗವಿಲ್ಲ ಎನ್ನುವುದು ನಿಜಕ್ಕೂ ದೌರ್ಭಾಗ್ಯ. ಸರ್ಕಾರಗಳು, ಸ್ಥಳೀಯ ಆಡಳಿತ ಮನುಷ್ಯರಂತೆಯು ಕಾಣದೆ ಹೀನವಾಗಿ ನಡೆಸಿಕೊಳ್ಳುತ್ತಿರುವುದು ವಿಷಾಧನಿಯ ಸಂಗತಿ.

Advertisements

ಬಡವರಿಗೆ ನಿಜವಾಗಿ ಸಲ್ಲಬೇಕಿದ್ದ ಸವಲತ್ತುಗಳು ಇದುವರೆಗೂ ದೊರೆಯದಿರುವುದು ದುರಂತ. ಸಂವಿಧಾನ ಎಲ್ಲರಿಗೂ ಬದುಕುವ, ತಮ್ಮ ತಮ್ಮ ಹಕ್ಕುಗಳನ್ನು ಪಡೆಯುವ, ಮೂಲಭೂತ ಸೌಕರ್ಯ ಪಡೆಯುವ ಹಕ್ಕುಳ್ಳವರಾಗಿದ್ದರು ಸಹ. ರಾಜಕೀಯ ಮೇಲಾಟಗಳಿಂದ ಬಡ ಜನತೆ ನಲುಗಿ ಹೋಗಿದ್ದಾರೆ.

ಕೊಡಗಿನಲ್ಲಿ ಎಷ್ಟೇ ಹೋರಾಟ, ಪ್ರತಿಭಟನೆ ನಡೆಸಿದರು ಅಧಿಕಾರಿಗಳಿಗೆ ಕಿವಿ ಕೇಳಿಸಲ್ಲ, ಸರ್ಕಾರಗಳು ಕುರುಡಾಗಿವೆ. ಬಡ ವರ್ಗಕ್ಕೆ ಕನಿಷ್ಠ ನಿವೇಶನ, ಸೂರು ಕಲ್ಪಿಸಲಾಗದೆ. ಜಾಣ ಕುರುಡರಾಗಿ ವರ್ತನೆ ತೋರುತ್ತಾ, ನಿರ್ಲಕ್ಷ್ಯದಿಂದ ಕಾಣುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು.

ರಾಜ್ಯಾಧ್ಯಕ್ಷ ಮಾರಾಸಂದ್ರ ಮುನಿಯಪ್ಪ ಮಾತನಾಡಿ ” ಕೊಡಗಿನಲ್ಲಿ ಬಡ ಜನರಿಗೆ ನಿರಂತರವಾಗಿ ಅನ್ಯಾಯವಾಗಿದ್ದು ಇದುವರೆಗೆ
ಒಂದೇ ಒಂದು ಸವಲತ್ತು ಸಿಗಲಿಲ್ಲ. ಎಲ್ಲಾ ಅವಕಾಶಗಳಿಂದ ವಂಚಿತರಾಗಿದ್ದು ನಿವೇಶನಕ್ಕಾಗಿ, ಸೂರಿಗಾಗಿ ನಿರಂತರ ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ. ಸರ್ಕಾರಗಳು ಜನಪರ ಯೋಜನೆ ತರುವಾಗ ಬಡವರಿಗೆ ಭೂಮಿ ಭಾಗ್ಯ, ವಸತಿ, ನಿವೇಶನದಂತ ಅತ್ಯಗತ್ಯ ಸವಲತ್ತು ಕಲ್ಪಿಸುವಲ್ಲಿ ವಿಫಲವಾಗಿವೆ. ಸರ್ಕಾರಗಳು ಕೇಂದ್ರ ಆಗಲಿ, ರಾಜ್ಯ ಸರ್ಕಾರ ಆಗಲಿ ಎಲ್ಲರಿಗೂ ಸೂರು ಕಲ್ಪಿಸುವ ಗುರಿ ಹೊಂದಿದ್ದರು ಕೊಡಗಿನಲ್ಲಿ ಮಾತ್ರ ಈಡೇರಲಿಲ್ಲ.

ಜನಪ್ರತಿನಿದಿಗಳು ಮತ ಪಡೆದರು ಹೊರತು ಬಡ ಜನರ ಹಿತ ಕಾಪಾಡಲಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸದೆ ಕೊಡಗಿನಲ್ಲಿ ವ್ಯಾಪಕವಾಗಿ ಬಡ ಕುಟುಂಬಗಳು ನಿವೇಶನ ಇರದೆ ಲೈನ್ ಮನೆ ಜೀತ ಮಾಡುತ್ತಿವೆ. ಅಲ್ಲಲ್ಲಿ ಪ್ಲಾಸ್ಟಿಕ್ ಹೊದಿಕೆಯಲ್ಲಿ ಜೀವನ ನಡೆಸುತ್ತಿವೆ ” ಎಂದು ವಿಷಾಧ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಬರಹದಲ್ಲಿ ವಾಸ್ತವ ತೆರೆದಿಟ್ಟವರು ಪೂರ್ಣಚಂದ್ರ ತೇಜಸ್ವಿ : ಡಾ. ತ್ರಿವೇಣಿ ಅಭಿಮತ

ಪಕ್ಷದ ಮುಖಂಡರಾದ ಎಂ ಗೋಪಿನಾಥ್, ವೆಂಕಟ ಗಿರಿಯಯ್ಯ, ಕೆ ಮೊಣ್ಣಪ್ಪ, ಮಹೇಶ್, ಕಿರಣ್ ಜಗದೀಶ್,ರಂಜಿತ್, ಪುನೀತ್ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X