ಹುಣಸೂರು ಶಾಸಕ ಜಿ ಡಿ ಹರೀಶ್ ಗೌಡ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು ಮೈಸೂರಿನ ಅಶೋಕ ರಸ್ತೆಯಲ್ಲಿರುವ ಎಂಡಿಸಿಸಿ ಬ್ಯಾಂಕ್ ಪ್ರತಿಭಟನೆ ನಡೆಸಿ ಸಾಲ ಮರುಪಾವತಿ ಮಾಡಿದ್ದರೂ ರೈತರಿಗೆ ಸಾಲ ನೀಡುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಾಲ ಕೊಡಲು ಕೂಡಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತ ತಾರತಮ್ಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಶಾಸಕ ಜಿ ಡಿ ಹರೀಶ್ ಗೌಡ ಸಾಲ ನೀಡಲು ಆನ್ ಲೈನ್ ಮೂಲಕ ರೈತರಿಂದ ಲಂಚ ಪಡೆದ ಅಧಿಕಾರಿಯ ದಾಖಲೆ ಬಿಡುಗಡೆ ಮಾಡಿ. ಬ್ಯಾಂಕ್ ಅಧಿಕಾರಿಗಳು ರೈತರಿಗೆ ಮೋಸ ಮಾಡುತ್ತಿದ್ದಾರೆ. ನಮ್ಮ ಕುಟುಂಬವನ್ನ ಸಹಕಾರಿ ಕ್ಷೇತ್ರದಿಂದ ದೂರ ಇಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ರೈತರಿಗೆ ಒಳಿತಾಗುತ್ತೆ ಅಂದರೆ ಅಧ್ಯಕ್ಷ ಗಾದಿ ತೊರೆಯಲಿಕ್ಕು ಸಿದ್ದನಿದ್ದೇನೆ. ರೈತರಿಗೆ ಯಾವುದೇ ಕಾರಣಕ್ಕು ಅನ್ಯಾಯ ಮಾಡಬೇಡಿ ಎಂದರು.
ಎಂಡಿಸಿಸಿ ಬ್ಯಾಂಕ್ ದಿವಾಳಿ ಆಗಿದೆ. ಹುಣಸೂರಿನ ರೈತರಿಗೆ ಬ್ಯಾಂಕ್ ನಲ್ಲಿ ಸಾಲ ನೀಡುತ್ತಿಲ್ಲ. ಕಳೆದ 5 ತಿಂಗಳಿನಿಂದ ಅಲೆಸುತ್ತಿದ್ದಾರೆ.ಹನಗೂಡು, ಧರ್ಮಪುರ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಸಾಲ ಕಟ್ಟಿದ್ದರೂ ಸಾಲ ನೀಡುತ್ತಿಲ್ಲ. ಸಾಲ ಕೊಡಲು ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸಚಿವ ಎನ್ ಎಸ್ ಭೋಸರಾಜು ಸೂಚನೆ

ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ. ವಯಕ್ತಿಕ ದ್ವೇಷ ಬದಿಗೊತ್ತಿ ಕೆಲಸ ಮಾಡಲಿ. ರೈತರಿಗೆ ಸಾಲ ನೀಡದೆ ತೊಂದರೆ ನೀಡುವುದು ಸರಿಯಲ್ಲ. ರೈತರ ಪರವಾಗಿ ಹೋರಾಟಕ್ಕೆ ಬಂದಿದ್ದೀನಿ. ಇಲ್ಲಿ ಯಾವ ಪಕ್ಷ ಅನ್ನುವುದು ಮುಖ್ಯವಲ್ಲ ರೈತರ ಹಿತ ಮುಖ್ಯ ಕೂಡಲೇ ರೈತರಿಗೆ ಸಾಲ ನೀಡುವ ವ್ಯವಸ್ಥೆ ಆಗಬೇಕು. ಅಧಿಕಾರಿಗಳು ಭ್ರಷ್ಟಾಚಾರದಿಂದ ಮುಕ್ತರಾಗಿರಬೇಕು ಎಂದು ಹೇಳಿದರು.