ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅನುಮಾನಾಸ್ಪದವಾಗಿ ಸಾವಿಗಿಡಾದ ಪಿಎಸ್ಐ ಪರಶುರಾಮ ಅವರ ಸಾವಿನ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ವಿಜಯಪುರ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ದಲಿತ ಮುಖಂಡ ಪರಶುರಾಮ ಲಂಬು ಅವರ ನೇತೃತ್ವದಲ್ಲಿ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ರ್ಯಾಲಿ ಹೊರಟು ಜಿಲ್ಲಾಧಿಕಾರಿಕಾರಿಗಳ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪರಶುರಾಮ ಸಾವಿನ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ವಹಿಸಬೇಕು. ಯಾದಗಿರಿಯ ಶಾಸಕರಾದ ಚನ್ನಾರಡ್ಡಿ ಹಾಗೂ ಆತನ ಮಗ ಹಂಪನಗೌಡ ಇವರನ್ನು ಕಿರುಕುಳದ ಹಿನ್ನೆಲೆಯಲ್ಲಿ ಪಿಎಸ್ಎ ಪರಶುರಾಮ ಅನುಮಾನಾಸ್ಪದ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಪಿಎಸ್‌ಐ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ಶಾಸಕ ಹಾಗೂ ಅವನ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಕೂಡಲೇ ಇವರನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರವು ಗಂಭೀರವಾಗಿ ಈ ಪ್ರಕರಣವನ್ನು ಪರಿಗಣಿಸಬೇಕು. ಇಲ್ಲಿಯವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ. ದಲಿತ ವರ್ಗಕ್ಕೆ ಸೇರಿದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಭಯಬೀತರಾಗಿದ್ದಾರೆ. ವರ್ಗಾವಣೆ, ಹಣ ಬೇಡಿಕೆ ಅಂತಹ ಅನಿಷ್ಠ ಪದ್ಧತಿಗೆ ಕಡಿವಾಣ ಹಾಕಬೇಕು, ಪಿ.ಎಸ್.ಐ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಮೇಶ ಕವಲಗಿ, ಮತಿನ್ ಕುಮಾರ ದೇವದಾರ, ಪರಶುರಾಮ ಛಲವಾದಿ, ಅಜಯ ಬೋರಗಿ, ವೀರೇಶ್ ವಾಲಿಕಾರ, ಮಾರುತಿ ಬೂದಿಹಾಳ, ಶಾಸ್ತ್ರಿ ಹೊಸಮನಿ, ಹಣಮಂತ ನಾಟೆಕಾರ, ಚೆನ್ನು ಕಟ್ಟಿಮನಿ, ಯಮನಪ್ಪ ಸಿದರೆಡ್ಡಿ, ಮಹಾದೇವ ಕಾಂಬಳೆ, ರಮೇಶ ಛಲವಾದಿ, ಗೋಪಿ ಛಲವಾದಿ, ಸುರೇಶ ಸಿಂಗೆ, ರಮೇಶ ಬೋರಗಿ, ರಾಜಶೇಖರ ಕುದರಿ, ದಯಾನಂದ ಹಾಯಲ್ಯಾಳ, ಸುನಿಲ್ ಸೂರ್ಯವಂಶಿ ಇತರರು ಉಪಸ್ಥಿತರಿದ್ದರು.
