ಪಿಎಸ್‌ಐ ಪರಶುರಾಮ ಛಲವಾದಿ ಸಾವಿನ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ಪಟ್ಟಣದ ತಹಶೀಲ್ದಾರ್ ದಲಿತ ಸಂಘರ್ಷ ಸಮಿತಿ ಮುಖಂಡರು ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ದಸಂಸ ಗದಗ ಜಿಲ್ಲಾಧ್ಯಕ್ಷ ದತ್ತು ಜೋಗಣ್ಣವರ, “ಪರಶುರಾಮ ಚಲವಾದಿ ಅವರು ಯಾದಗಿರಿ ಶಹರ ಪೋಲಿಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ಥಳೀಯ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಮಗನಾದ ಸನ್ನೀಗೌಡ ಇವರು ಜಾತಿ ದೌರ್ಜನ್ಯ, ಹಣದ ಬೇಡಿಕೆ ಹಾಗೂ ಕಿರುಕುಳದಿಂದ ಪರಶುರಾಮ ಅವರು ಸಾವನಪ್ಪಿದ್ದಾರೆಂದು ಸಂಶಯವಿದೆ. ಈ ಸಾವಿಗೆ ಕಾರಣವಾದರನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು. ಕಾನೂನು ರೀತಿಯಲ್ಲಿ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಆ ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ರೈತರ ಜಮೀನಿನಲ್ಲಿ ಕಾಣಿಸಿಕೊಂಡ ಎರಡು ಕಾಡಾನೆ; ಸಾರ್ವಜನಿಕರಲ್ಲಿ ಆತಂಕ
ಈ ಸಂದರ್ಭದಲ್ಲಿ ಎಫ್. ವೈ. ದೊಡ್ಡಮನಿ, ಮುತ್ತು ಸುರಕೋಡ, ದತ್ತಾತ್ರೇಯ ಜೋಗಣ್ಣವರ, ವಿಜಯಕುಮಾರ ಛಲವಾದಿ, ನಿಂಗರಾಜ ಸಂಗಳದ, ಯಶವಂತ ನಡವಿನಮನಿ ಪುಟ್ಟರಾಜ, ಬಸವರಾಜ ಜೋಗಣ್ಣವರ, ನವೀನ ಜೋಗಣ್ಣವರ, ಗುರುನಾಥ ಕೆಂಗಾರಕರ್, ಕುಮಾರ ಚಲವಾದಿ, ಶರಣಪ್ಪ ಚಲವಾದಿ, ಅಶೋಕ ತಾಳದವರ ಉಪಸ್ಥಿತರಿದ್ದರು.
