ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗೋದುತಾಯಿ ಕಾಲೇಜಿನ ವಸತಿ ನಿಲಯದಲ್ಲಿ ನಡೆದಿದೆ.
ಆಳಂದ ಪಟ್ಟಣದ ನಿವಾಸಿ ಬಾಷಾ ಮಕಾಂದರ್ ಅವರ ಮಗಳು ನಮೀರಾ ಸರ್ವಾತ್ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ವರದಿಯಾಗಿದೆ.
ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ನಮೀರಾ ಬುಧವಾರ ಆಳಂದ ಪಟ್ಟಣದಿಂದ ಕಲಬುರಗಿಗೆ ಬಂದಿದ್ದಳು. ಗೋದುತಾಯಿ ಹಾಸ್ಟೆಲ್‌ಗೆ ಬಂದ ಬಳಿಕ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾಳೆ. ಸಹಪಾಠಿ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಲು ಕರೆದಾಗ, ತಾನು ಆಮೇಲೆ ಬರುತ್ತೇನೆ ಎಂದಿದ್ದಳು. ಕೋಣೆಯಿಂದ ಎಲ್ಲರೂ ಹೋದ ನಂತರ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಈ ಕುರಿತಾಗಿ ಸಹಚರ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಶಾಲೆಗೆ ಹೋಗುವಾಗ ಪುಡಾರಿಗಳ ಕಿರುಕುಳ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಈ ಕುರಿತು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.