ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕ ಗದಗ ವತಿಯಿಂದ ಬೆಂಗಳೂರು ದಸಾಪ ವಿಭಾಗೀಯ ಸಂಯೋಜಕರಾದ ಗಣಪತಿ ಚಲವಾದಿ ಅವರು ಸೂಚಿಸಿದಂತೆ ರಘು ಆರ್.ಮಲ್ಲಣ್ಣರ್ ಅವರನ್ನು ಶಿವಮೊಗ್ಗ ಜಿಲ್ಲಾ ದಸಾಪ ಘಟಕದ ಅಧ್ಯಕ್ಷರೆಂದು ನೇಮಕ ಮಾಡಿ ಕಾರ್ಯ ನಿರ್ವಹಿಸಲು ಸೂಚಿಸಿದೆ.
ಇವರ ಅವಧಿ ಮೂರು ವರ್ಷ ಇರುತ್ತದೆ. ಹಾಗೆ ಬದಲಾಯಿಸುವ ಇಲ್ಲವೆ ಮುಂದುವರೆಸುವ ಹಕ್ಕು ರಾಜ್ಯ ಕಾರ್ಯಕಾರಿ ಸಮಿತಿಗೆ ಹಾಗೂ ವಿಭಾಗೀಯ ಸಂಯೋಜಕರಿಗೆ ಇರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ | ʼದಸಂಸʼ ಹೆಸರು ದುರುಪಯೋಗದ ವಿರುದ್ಧ ಕ್ರಮ: ಗುರುಮೂರ್ತಿ
ಸ್ಥಳೀಯವಾಗಿ ಸಭೆ ಕರೆದು, ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ತಯಾರಿಸಿಕೊಂಡು, ಹಾಗೂ ತಾಲೂಕು ಅಧ್ಯಕ್ಷರನ್ನು ನೇಮಿಸಿಕೊಂಡು ಅನುಮೋದನೆಗಾಗಿ ರಾಜ್ಯ ಸಮಿತಿಗೆ ಕಳಿಸಿಕೊಟ್ಟಿದ್ದಾರೆ. ದಲಿತ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಸಮಾನ ಮನಸ್ಕರನ್ನು ಸೇರಿಸಿಕೊಂಡು ಅಹಿಂದ ಹಿನ್ನೆಲೆಯಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಘಟಕವನ್ನು ಸಂಘಟಿಸಲು ತಿಳಿಸಲಾಗಿದೆ.
