ಲಿಂಗಸಗೂರು ತಾಲ್ಲೂಕಿನ ಗುರುಗುಂಟ ಹೊರವಲಯದ ಗೊಲಪಲ್ಲಿ ಸಮೀಪ ಸೋಮವಾರ ತಡರಾತ್ರಿ ಯುವಕರ ಗುಂಪೊಂದು ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಖಾಸಗಿ ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ಜರುಗಿದೆ.
ಸುರುಪುರ ಕಡೆಯಿಂದ ಲಿಂಗಸುಗೂರು ಕಡೆಗೆ ಹೊರಟ ಬಸ್ ಗಳಿಗೆ ಗೊಲಪಲ್ಲಿ ಗುಡ್ಡದ ಬಳಿ ರಾತ್ರಿ 2 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಬಂದ ಸುಮಾರು 20 ಯುವಕರ ಗುಂಪು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯಲ್ಲಿ ನಾಲ್ಕೈದು ಬಸ್, ಲಾರಿಗಳ ಗಾಜುಗಳು ಒಡೆದು ಚೂರು ಚೂರಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಘಟನೆಯಿಂದ ಕೆಲವೊತ್ತು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸ್ನಾನಕ್ಕೆಂದು ಹಳ್ಳಕ್ಕೆ ತೆರಳಿದ ಇಬ್ಬರು ಬಾಲಕರು ನೀರುಪಾಲು
ತಾಲೂಕಿನ ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
