ಆಸ್ಪತ್ರೆಯಿಂದ ಹೊರಬರುತ್ತಿದ್ದ ತಾಯಿ ಮತ್ತು ಮಗನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.
ಆಸ್ಪತ್ರೆಯಿಂದ ಹೊರಬಂದು ರಸ್ತೆಯಲ್ಲಿ ನಿಂತಿದ್ದ ಮಗನ ಮೇಲೆ ಏಕಾಏಕಿ ಬೀದಿನಾಯಿ ದಾಳಿ ಮಾಡಿದೆ. ಮಗ ಕೂಗಾಟ ಕೇಳಿ ಬಂದ ತಾಯಿ ಮಗನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ತಾಯಿ ಮೇಲೂ ನಾಯಿ ದಾಳಿ ಮಾಡಿದೆ. ಸ್ಥಳೀಯರು ಬಂದು ನಾಯಿಗೆ ಬಡಿಗೆಯಿಂದ ಹೊಡೆದರೂ ತಪ್ಪಿಸಲು ಸಾಧ್ಯವಾಗಿಲ್ಲ.
ತಾಯಿ-ಮಗ ಇಬ್ಬರನ್ನು ನಾಯಿ ಕಚ್ಚಿ ಗಾಯಗೊಳಿಸಿದೆ. ಗಂಗಮ್ಮ (36), ಮಗ ಪ್ರೀತಂ (15) ಗಾಯಾಳುಗಳು. ಸದ್ಯ ಇಬ್ಬರನ್ನೂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.