ಫೋಟೋ ತೆಗೆಯಲು ನದಿಯ ಮೇಲಿನ ಬ್ರಿಡ್ಜ್ ಬದಿಗೆ ನಿಲ್ಲಿಸಿ ನೀರಿಗೆ ತಳ್ಳಿ ಕೊಲ್ಲಲು ಯತ್ನಿಸಿದಳು ಎಂದು ಪತ್ನಿಯ ವಿರುದ್ಧ ಆರೋಪ ಮಾಡಿದ್ದ ಪತಿ ತಾತಪ್ಪನ ವಿರುದ್ಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೊ ಪ್ರಕರಣ ದಾಖಲಾಗಿದೆ.
ಏಪ್ರಿಲ್ 18ರಂದು ಶಕ್ತಿನಗರದ ಬಸವಕಲ್ಯಾಣ ಮಂಟಪದಲ್ಲಿ ಶಕ್ತಿನಗರದ ತಾತಪ್ಪ ಅವರೊಂದಿಗೆ ಮದುವೆ ಮಾಡಿಸಿದ್ದಾರೆ. ಮದುವೆಯಾದ 11ನೇ ದಿನಕ್ಕೆ ಏಪ್ರಿಲ್ 28ರಂದು ಪ್ರಸ್ತದ ಹೆಸರಲ್ಲಿ ತಾತಪ್ಪ ದೈಹಿಕ ಸಂಪರ್ಕ ಮಾಡಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾಳೆ.
ತಾತಪ್ಪನ ಮದುವೆ ಮಾಡಿಸಿದ ಶಕ್ತಿನಗರದ ತಾತಪ್ಪ ನರಸಯ್ಯ, ಗದ್ದೆಮ್ಮ ನರಸಯ್ಯ, ಯಾದಗಿರಿ ಜಿಲ್ಲೆಯ ಜೆಂಗಿನಗಡ್ಡಿಯ ಸುಮಂಗಲಾ ವೀರೇಶ ಗೀತಾ ಆಂಜನೇಯ, ಆಂಜನೇಯ, ಶಕ್ತಿನಗರದ ಗದ್ದೆಪ್ಪ ನರಸಯ್ಯ, ರೇಣುಕಾ ಗದದೆಪ್ಪ, ಸದಾನಂದ ನರಸಯ್ಯ, ಮಹಾದೇವಿ ಸದಾನಂದ ಹಾಗೂ ರಾಮನಗೌಡ ವಿರುದ್ಧ ಬಾಲ್ಯ ವಿವಾಹ ನಿಷೇಧ ಪ್ರಕರಣವನ್ನು ದೇವಸುಗೂರಿನ ಪಿಡಿಒ ರವಿಕುಮಾರ ದೂರು ದಾಖಲಿಸಿದ್ದಾರೆ.