ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ (ಎಐಯುಟಿಯುಸಿ) ರಾಯಚೂರು ಜಿಲ್ಲಾ ಘಟಕವು ನಗರದ ಅಂಬೇಡ್ಕರ ವೃತ್ತದಲ್ಲಿ ಧರಣಿ ನಡೆಸಿತು.
“ದೇಶವ್ಯಾಪಿ ನಡೆದಿರುವ ಮುಷ್ಕರದ ಭಾಗವಾಗಿ ಪ್ರತಿಭಟನಾ ಧರಣಿ ನಡೆಸಿದ ಕಾರ್ಮಿಕರು ಪಿಎಫ್, ಇಎಸ್‌ಐ ಸೌಲಭ್ಯ ಪಡೆಯಲು ವಿಧಿಸಲಾಗಿರುವ ವೇತನ ಮಿತಿಯನ್ನು ರದ್ದುಗೊಳಿಸಬೇಕಯ. ಎಲ್ಲಾ ಕಾರ್ಮಿಕರಿಗೂ ಸಾಮಾಜಿಕ ಭದ್ರತಾ ಯೋಜನೆಗಳ ಖಾತ್ರಿ ನೀಡಬೇಕು.ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆಶಾ, ಬಿಸಿಯೂಟ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ 31 ಸಾವಿರ ರೂ ನಿಗದಿಪಡಿಸಬೇಕು. ಜಿಲ್ಲೆಯಲ್ಲಿರುವ ಇಎಸ್‌ಐ ಡಿಸ್ಪೇನರಿಯನ್ನು ಮೇಲ್ದರ್ಜೆಗೇರಿಸಿ, ಬೀದರ್ ಜಿಲ್ಲೆಯ ಮಾದರಿಯಂತೆ ಎಲ್ಲಾ ಜಿಲ್ಲೆಯಲ್ಲಿಯೂ ಕಾರ್ಮಿಕರ ವಿವಿದೋದ್ದೇಶ ಸಹಕಾರ ಸಂಘ ರಚಿಸಬೇಕು” ಎಂದು ಸಂಘಟನೆಯ ಮೂಖಂಡರು ಆಗ್ರಹಿಸಿದರು.
ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಪ್ರಮುಖ ಉದ್ಯಮಗಳಾದ ಶಿಲ್ಪಾ ಫಾರ್ಮಾ ಲೈಫ್ ಸೈನ್ಸ್, ರಾಯಕೇಮ್ ಮೇಡಿಕೇರ್, ಆರ್‌ಟಿಪಿಎಸ, ವೈಟಿಪಿಎಸ್, ಕೈಗಾರಿಕೆಗಳಲ್ಲಿ ದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು; ಪ್ರಕರಣ ದಾಖಲು
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ತಿರುಮುಲರಾವ್, ಉಪಾಧ್ಯಕ್ಷ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಮಹೇಶ ಚಿಕಲಪರ್ವಿ, ಆಶಾ ಸಂಘಟನೆಯ ಈರಮ್ಮ, ರಾಧಾ, ಪ್ರಭಾ, ಕರಿಲಿಂಗ, ಶರಣಗೌಡ, ಚೇತನಕುಮಾರ, ರಾಮಾಂಜನೇಯ, ಹಾಸ್ಟೆಲ್ ನೌಕರರಾದ ಗಾಯತ್ರಿ, ಮಹೇಶ್ವರಿ, ಅಂಬಿಕಾ, ಹುಚ್ಚಪ್ಪ, ಅಮರೇಶ, ಹುಲಿಗಪ್ಪ, ಬಸವರಾಜ ಸೇರಿದಂತೆ ಅನೇಕರು ಇದ್ದರು.
