ರಾಯಚೂರು ರೈಲ್ವೆ ನಿಲ್ದಾಣದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರುಣಕುಮಾರ ಜೈನ್‌ಗೆ ದಕ್ಷಿಣ ಮಧ್ಯ ರೈಲ್ವೆಯ ಸಲಹಾ ಸಮಿತಿಯ ಮಾಜಿ ಸದಸ್ಯ ಬಾಬುರಾವ್ ಮನವಿ ಸಲ್ಲಿಸಿದರು.
“ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ರಾಯಚೂರು ರೈಲು ನಿಲ್ದಾಣದ ಹೊಸ ಕಟ್ಟಡ ನಿರ್ಮಾಣ ಪ್ರಾರಂಭಿಸುವುದು, ಸಿಂಧನೂರಿನಿಂದ ರಾಯಚೂರಿಗೆ ಹೊಸ ರೈಲು ಮಾರ್ಗದ ಬಾಕಿ ಕಾಮಗಾರಿಯನ್ನು ತ್ವರಿತಗೊಳಿಸುವುದು, ಗದಗದಿಂದ ವಾಡಿವರೆಗಿನ ಹೊಸ ರೈಲು ಮಾರ್ಗದ ಬಾಕಿ ಕಾಮಗಾರಿಯನ್ನು ತೀವ್ರಗೊಳಿಸಬೇಕು” ಎಂದು ಅವರು ಒತ್ತಾಯಿಸಿದರು.
ರಾಯಚೂರಿನಿಂದ ಯರಮರಸ್‌ಗೆ ಗುಡ್ ಶೆಡ್ ಸ್ಥಳಾಂತರ, ಸೋಲಾಪುರ-ಗುಂತಕಲ್ ಪ್ಯಾಸೆಂಜರ್ ಮರುಸ್ಥಾಪನೆ, ವಿಶಾಖಪಟ್ಟಣಂ-ಮಹೆಬೂಬ್‌ನಗರ ರೈಲನ್ನು ರಾಯಚೂರುವರೆಗೆ ವಿಸ್ತರಿಸುವ ಪ್ರಸ್ತಾವನೆ, ಮಚಲಿ ಪಟ್ಟಣಂ-ಮಂತ್ರಾಲಯ ವಿಶೇಷ ಟ್ರೈ-ಸಾಪ್ತಾಹಿಕ ಎಕ್ಸ್ಪ್ರೆಸ್ ಆರಂಭ, ಕಾಕಿನಾಡ-ರಾಯಚೂರು ವಿಶೇಷ ಟ್ರೈ-ಸಾಪ್ತಾಹಿಕ ಎಕ್ಸ್ಪ್ರೆಸ್ ಮರುಸ್ಥಾಪನೆ, ಬೆಳಗಾವಿ-ಮಂಗಳೂರು ಎಕ್ಸ್ಪ್ರೆಸ್ ಮರುಸ್ಥಾಪನೆ, ರಾಯಚೂರಿನಲ್ಲಿ ಯಶವಂತಪುರ ಎಸಿ ದುರಂತೋ ಎಕ್ಸ್ಪ್ರೆಸ್ ನಿಲುಗಡೆ, ರಾಯಚೂರಿನಲ್ಲಿ ಗೋರಖ್‌ಪುರ-ಯಶವಂತಪುರ ಎಕ್ಸ್ಪ್ರೆಸ್‌ಗೆ ನಿಲುಗಡೆ, ಯಶವಂತಪುರ-ಬಿಕಾನೇರ್ ಎಕ್ಸ್ಪ್ರೆಸ್ ಅನ್ನು ರಾಯಚೂರು ಮೂಲಕ ತಿರುಗಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ರಾಯಚೂರು | ಹದಿಹರೆಯದ ಮಕ್ಕಳ ಸಮಸ್ಯೆ-ಪರಿಹಾರಕ್ಕೆ ಜಾಗೃತಿ ಕೇಂದ್ರ ಆರಂಭ
ಮಂಚಲಾಪುರ ರಸ್ತೆ ರಾಯಚೂರು ರೈಲ್ವೆ ಗೇಟ್‌ನಲ್ಲಿ ಅಂಡರ್ ಪಾಸ್ ಸೇತುವೆ ನಿರ್ಮಾಣ, ಪ್ಲಾಟ್‌ಫಾರ್ಮ್ನಲ್ಲಿ ಆಹಾರ ಟ್ಯಾಂಕ್ ಪ್ಲಾಟ್‌ಫಾರ್ಮ್ನಲ್ಲಿ ಎಸ್ಕಲೇಟರ್‌ಗಳು, ಪ್ರಸ್ತುತದಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್ ಅಗತ್ಯವಿದೆ ಎಂದ ಅವರು, ನಗರದ ರೈಲ್ವೆ ನಿಲ್ದಾಣಕ್ಕೆ ಮೇಲಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಸಾದ್, ನಾಗೇಶ್ವರ ರಾವ್, ಬಸವರಾಜ್ ಅಸ್ಕಿಹಾಳ, ಹೇಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
