ಮುಸ್ಲಿಂ ಬಾಂಧವರ ಪವಿತ್ರ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ರಾಯಚೂರು ಡಿವೈಎಸ್‌ಪಿ ಸತ್ಯನಾರಾಯಣರಾವ್ ಹೇಳಿದರು.
ರಾಯಚೂರು ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹಲವು ಧರ್ಮಗಳ ಗಣ್ಯರೊಂದಿಗೆ ಶಾಂತಿಪಾಲನೆ ಸಭೆ ನಡೆಸಿ, ಅವರು ಮಾತನಾಡಿದರು.
“ಕಾನೂನು ಪರಿಮಿತಿಯೊಳಗೆ ಹಬ್ಬವನ್ನು ಆಚರಣೆ ಮಾಡಬೇಕು. ಬಕ್ರೀದ್ ಎಂದರೆ ಕೇವಲ ಬಲಿದಾನ ಮಾತ್ರವಲ್ಲ, ತ್ಯಾಗ ಎನ್ನುವುದನ್ನೂ ನಾವೆಲ್ಲರು ತಿಳಿಯಬೇಕಿದೆ. ಜೊತೆಗೆ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಬ್ಬವನ್ನು ಆಚರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ನಿಲ್ದಾಣದಲ್ಲಿ ನಿಲ್ಲಿಸದ ಬಸ್‌ಗೆ ಕಲ್ಲೆಸೆದು ದಂಡ ತೆತ್ತ ಮಹಿಳೆ
ಸಭೆಯಲ್ಲಿ ಸದರ್ ಬಜಾರ್ ಪೊಲೀಸ್ ಠಾಣೆ ಪಿಐ ಗುರುರಾಜ ಕಟ್ಟಿಮನಿ, ಗುಂಡುರಾವ್, ತಹಸೀಲ್ದಾರ್ ಚೆನ್ನಮಲ್ಲಪ್ಪ ಘಂಟಿ, ಪಶು ಸಂಗೋಪನಾ ಇಲಾಖೆಯ ಎಡಿ ಬಸವರಾಜ, ನಗರಸಭೆಯ ಯೂಸೂಫ್‌ಖಾನ್ ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು