ವಿಜಯಪುರ ಶಾಸಕ ಬಸನಗೌಡ ಯತ್ನಾಳ ಮಾತನಾಡುವಾಗ ವ್ಯಕ್ತಿಯೊಬ್ಬ ಲಾಂಗ್ ಹಿಡಿದು ವೇದಿಕೆ ಕಡೆಗೆ ನುಗ್ಗಿದ ಘಟನೆ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸರಕಾರಿ ಪಿಯು ಕಾಲೇಜು ಮೈದಾನದಲ್ಲಿ ಇಂದು ಶ್ರೀ ರಾಮಸೇನೆ ವತಿಯಿಂದ ಆಯೋಜಿಸಿದ್ದ ಹಿಂದು ಸಾಮ್ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಮಾತನಾಡುವಾಗ ಘಟನೆ ನಡೆದಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗಾಳಿ ಮಳೆಗೆ ಬೆಳೆ ಹಾನಿ; ಪರಿಹಾರ ನೀಡಲು ಒತ್ತಾಯ
ಶ್ರೀನಿವಾಸ ಪೂಜಾರಿ ಎನ್ನುವ ವ್ಯಕ್ತಿಯು ಬಸನಗೌಡ ಯತ್ನಾಳ ಮಾತನಾಡುವಾಗ ಲಾಂಗ್ ಹಿಡಿದು ವೇದಿಕೆಗೆ ಕಡೆಗೆ ಮುಂದಾದಾಗ ಅಲ್ಲಿದ್ದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.ಹೆಚ್ಚುವರಿ ಎಸ್ ಪಿ ಜಿ ಹರೀಶ್ ವಿಚಾರಣೆ ನಡೆಸಿದ್ದಾರೆ.
ಶ್ರೀನಿವಾಸ ಪೂಜಾರಿ ಎನ್ನುವ ವ್ಯಕ್ತಿ ಮೂಲತ ಲಿಂಗಸಗೂರು ನಿವಾಸಿಯಾಗಿದ್ದು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ವ್ಯಕ್ತಿ ಮಚ್ಚು ಹಿಡಿದು ವೇದಿಕೆ ಕಡೆ ನುಗ್ಗಿದ್ದರಿಂದ ಕೆಲ ಸಮಯ ಆತಂಕಕ್ಕೆ ಕಾರಣವಾಗಿತ್ತು.