ರಸ್ತೆ ಬದಿಗೆ ನಿಂತಿರುವ ಟ್ರಾಕ್ಟರ್ ಟ್ರಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮುದಗಲ್ ಪಟ್ಟಣದ ಆಶಿಹಾಳ ಗ್ರಾಮದ ಬಸವಣ್ಣ ದೇವಸ್ಥಾನ ಬಳಿ ನಡೆದಿದೆ.
ಅಮರೇಶ ತಿಪ್ಪಣ್ಣ (24) ಆಶಿಹಾಳ ತಾಂಡದ ಮೂಲದ ನಿವಾಸಿ ಎಂದು ಗುರುತಿಸಲಾಗಿದೆ.
ಮುದಗಲ್ ಪಟ್ಟಣದಿಂದ ಮೀನು ವ್ಯಾಪಾರ ಮುಗಿಸಿಕೊಂಡು ಮರಳಿ ಸ್ವಗ್ರಾಮಕ್ಕೆ ತೆರಳುವಾಗ ರಸ್ತೆ ಬದಿ ಟ್ರಾಕ್ಟರ್ ಟ್ರಕ ನಿಲ್ಲಿಸಲಾಗಿತ್ತು.ಅದು ರಾತ್ರಿ ವೇಳೆ ಅದು ಕಾಣಿಸದೆ ಈ ದುರ್ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ಸುದ್ಡಿ ಓದಿದ್ದೀರಾ? ರಾಯಚೂರು | ಹೆಚ್ಚುವರಿ ಭೂಮಿ ಹಂಚಿಕೆ ವಿಳಂಬ; ಮಾನಸಯ್ಯ ಬೇಸರ
ಘಟನಾ ನಡೆದ ಸ್ಥಳಕ್ಕೆ ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ ಮತ್ತು ಪಿಎಸೈ ವೆಂಕಟೇಶ ಮಾಡಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.