ಟಾಟಾಏಸಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದು 4 ಜನ ಗಂಭೀರ ಗಾಯಗೊಂಡ ಘಟನೆ ಮಸ್ಕಿ ತಾಲೂಕಿನ ಮುದಬಾಳ ಕ್ರಾಸ್ ಬಳಿ ನಡೆದಿದೆ.
ವಿಜಯಾನಂದ ನಾಗರೆಡ್ಡಿ ( 22) ಮೃತಪಟ್ಟಿರುವ ಬೈಕ್ ಸವಾರ ಎನ್ನಲಾಗಿದೆ. ಮಸ್ಕಿ-ಲಿಂಗಸುಗೂರು ಹೋಗುವ ಮಾರ್ಗ ಮಧ್ಯದಲ್ಲಿ ಮುದಬಾಳ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರು ಪಲ್ಟಿ : ಮಹಿಳೆ ಸಾವು, ಕುಟುಂಬದ ಐವರಿಗೆ ಗಾಯ
ಬೈಕ್ ನಲ್ಲಿ ಇಬ್ಬರು ಮತ್ತು ಟಾಟಾ ಏಸ್‌ನಲ್ಲಿ 3 ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯ, ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.