ಮಾಜಿ ಸಚಿವ ಶಿವನಗೌಡ ನಾಯಕ್ ಕೆ. ಅವರು 45 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಾಗ ನವಿಲು ಗರಿಯಿಂದ ತಯಾರಿಸಿದ ಹಾರವನ್ನು ಸಾರ್ವಜನಿಕವಾಗಿ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕಾರಣ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನಕಪುರ ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ದೂರು ನೀಡಿದ ಅವರು, ಶಿವನಗೌಡ ನಾಯಕ್ ಕೆ. ಅವರು ನವಿಲು ಗರಿಯಿಂದ ತಯಾರಿಸಲಾದ ಹಾರವನ್ನು ಧರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಛಾಯಾಚಿತ್ರಗಳ ಮೂಲಕ ಸ್ಪಷ್ಟವಾಗಿ ದೃಢಪಟ್ಟಿದೆ. ಈ ಕೃತ್ಯವು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ನವಿಲು ಭಾರತದ ರಾಷ್ಟ್ರೀಯ ಪಕ್ಷಿ ಆಗಿದ್ದು, ಇದರ ಸಾಂಸ್ಕೃತಿಕ, ಪಾವಿತ್ರ್ಯ ಹಾಗೂ ಜೀವವೈವಿಧ್ಯದಲ್ಲಿ ಮಹತ್ವಪೂರ್ಣ ಸ್ಥಾನವಿದೆ. ನವಿಲು ಮತ್ತು ಇದರ ಎಲ್ಲಾ ಅಂಗಾಂಶಗಳು, ವಿಶೇಷವಾಗಿ ನವಿಲು ಗರಿಗಳು, Indian Wildlife (Protection) Act, 1972ರ ಅನ್ವಯ Schedule-l species , ಪಕ್ಷಿಯನ್ನು ಅಥವಾ ಇದರ ಅಂಗಾಂಶಗಳನ್ನು ಸಂಗ್ರಹಿಸುವುದು, ಉಳಿಸಿಕೊಳ್ಳುವುದು, ಪ್ರದರ್ಶಿಸುವುದು, ವ್ಯಾಪಾರ ಮಾಡುವುದು, ಅಥವಾ ಉಡುಗೊರೆ ರೂಪದಲ್ಲಿ ನೀಡುವುದು ಕಾನೂನಾತ್ಮಕವಾಗಿ ಸಂಪೂರ್ಣ ನಿಷಿದ್ಧವಾಗಿದೆ. ನವಿಲು ಗರಿಯನ್ನು ಯಾವುದೇ ರೀತಿಯ ಅನಧಿಕೃತ ಉಪಯೋಗ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ಅತ್ಯಂತ ಗಂಭೀರ ಅಧಿಕೃತ ಕ್ರಿಮಿನಲ್ ಅಪರಾಧವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
“ರಾಜ್ಯಮಟ್ಟದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದ ಮಾಜಿ ಶಾಸಕರಾದ ಶ್ರೀ ಶಿವನಗೌಡ ನಾಯಕ್ ಕೆ. ಅವರಿಗೆ ನವಿಲು ಗರಿಯಿಂದ ತಯಾರಿಸಲಾದ ಹಾರವನ್ನು ಕಾರ್ಯಕ್ರಮವೊಂದರಲ್ಲಿ ಹಾಕಿದ ದೃಶ್ಯಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ ಹರಡುತ್ತಿದ್ದು, ಸಾರ್ವಜನಿಕ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರ ನಡುವೆ ತೀವ್ರ ಆತಂಕ ಮೂಡಿಸಿರುವಂತಹ ಘಟನೆಯಾಗಿದೆ. ಈ ದೃಶ್ಯಗಳಲ್ಲಿ ನವಿಲು ಗರಿಯನ್ನು ಹಾರವಾಗಿ ವಿನ್ಯಾಸಗೊಳಿಸಿ. ಅದನ್ನು ಮಾಜಿ ಶಾಸಕರಿಗೆ ಗೌರವ ಸೂಚಕವಾಗಿ ಧರಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
ಈ ಕೃತ್ಯವು ಕೇವಲ ನೈತಿಕ ದೋಷವಷ್ಟೇ ಅಲ್ಲ, ಬದಲಾಗಿ ನವಿಲು ಎಂಬ ರಾಷ್ಟ್ರಪಕ್ಷಿಯ ಅಂಗವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972′ ರ many ‘Scheduled-l ನಿಯಮ provisions ಅನ್ನು ಉಲ್ಲಂಘಿಸಿರುವ ಗಂಭೀರ ಅಪರಾಧವಾಗಿದೆ. ಇಂತಹ ಕಾರ್ಯಗಳು ಸಾರ್ವಜನಿಕರಲ್ಲಿ ತಪ್ಪು ಸಂದೇಶವನ್ನು ಹರಡುತ್ತದ್ದಲ್ಲದೆ. ಇತರರು ಕೂಡಾ ಇದೇ ರೀತಿಯ ಕೃತ್ಯಗಳಿಗೆ ಪ್ರೇರಿತರಾಗುವ ಅಪಾಯವಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ‘ಕೆಸರಲ್ಲಿ ಶಾಲೆಯೋ, ಶಾಲೆಯಲ್ಲಿ ಕೇಸರೋʼ
ತಕ್ಷಣ ತನಿಖೆ ಆರಂಭಿಸಿ. ನವಿಲು ಗರಿಯ ಮೂಲವನ್ನು ಪತ್ತೆಹಚ್ಚಿ. ಮಾದರಿ ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿ, ಕ್ರಮಬದ್ಧವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ. ಮತ್ತು ಈ ಅಪರಾಧಕ್ಕೆ ತಕ್ಕಂತೆ ವೈಜ್ಞಾನಿಕ ಹಾಗೂ ಕಾನೂನಾತ್ಮಕ ದೃಷ್ಟಿಯಿಂದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
