ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕರ ಆಸ್ತಿ ನಾಶ, ಸಮಾಜಘಾತುಕ ಕೃತ್ಯ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಿಜೆಪಿ ಯುವ ಮುಖಂಡ, ವಾರ್ಡ್ ನಂಬರ್ 1 ಪಟ್ಟಣ ಪಂಚಾಯತಿ ಸದಸ್ಯೆಯ ಪುತ್ರ ರೋನಾಲ್ಡ್ ಅಗಸ್ಟೀನ್ ಅಲಿಯಾಸ್ ಸನ್ನಿ ಎಂಬಾತನ್ನು 6 ತಿಂಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಲು ರಾಯಚೂರು ಉಪ ವಿಭಾಗೀಯ ದಂಡಾಧಿಕಾರಿ ಗಜಾನನ ಬಾಲೆ ಆದೇಶಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ಉಪ ಅಧೀಕ್ಷಕರು ಸಲ್ಲಿಸಿರುವ ದೂರಿನ ಮೇರೆಗೆ ವಿಚಾರಣೆ ಈ ನಡೆಸಿ ಸನ್ನಿ ವಿರುದ್ಧ ಸ್ಥಳೀಯ ಪಶ್ಚಿಮ
ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ 8 ಪ್ರಕರಣಗಳಲ್ಲಿ ಒಂದು ವಿಚಾರಣೆ ಬಾಕಿ ಇದ್ದು ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ನಗರದ ರಾಮಾಂಜನೇಯ ಕಾಲೋನಿಯಲ್ಲಿ 20 ಜನರ ಯುವಕರ ಗ್ಯಾಂಗ್ ಕಟ್ಟಿಕೊಂಡು 2014 ರಿಂದ ನಿರಂತರವಾಗಿ ಅನೇಕರಿಗೆ ಬೆದರಿಕೆ, ಕೊಲೆ ಯತ್ನ, ಸಾರ್ವಜನಿಕವಾಗಿ ಲಾಂಗು,ಮಚ್ಚು ಸೇರಿ ಮಾರಾಕಾಸ್ತ್ರಗಳ ಪ್ರದರ್ಶನ ಮಾಡಿ ದೌರ್ಜನ್ಯ ಎಸಗುತ್ತಿದ್ದ ಆರೋಪಿಸಲಾಗಿದೆ.
ತಾಯಿ ನಗರಸಭೆ ಸದಸ್ಯೆಯಾಗಿರುವ ಕಾರಣ ರಾಜಕೀಯ ಅಧಿಕಾರ ದುರುಪಯೋಗ ಪಡೆದು ಕಾರ್ಮಿಕರ ಮೇಲೆ ದರ್ಪ ತೋರಿಸಿ ಅಮಾನವೀಯವಾಗಿ ವರ್ತಿಸುತ್ತಾ ಅವರ ಕುರಿತು ಪ್ರಶ್ನಿಸಿದವರಿಗೆ, ಕೇಸ್ ದಾಖಲಿಸಲು ಯತ್ನಿಸಿದರೆ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ಸಲ್ಲಿಸಿದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಜು.21 ರಿಂದ 2026 ಜನವರಿಗೆ 27 ವರೆಗೆ ಜಿಲ್ಲೆಯನ್ನು ಪ್ರವೇಶಿಸುವದನ್ನು ನಿರ್ಬಂಧಿಸಲಾಗಿದೆ. ಶಾಂತಿಭಂಗ, ಸಮಾಜಿಕವಾಗಿ ಜನರಲ್ಲಿ ಭಯ ಹುಟ್ಟಿಸುವ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ದೂರುಗಳ ಮೇಲೆ ಗಡಿಪಾರು ಮಾಡಲು ವಿಚಾರಣೆ ನಡೆಸಿದ್ದು ಆರೋಪಿ ಗೈರು ಹಾಜರಾಗಿ ಯಾವುದೇ ಆಕ್ಷೇಪಣೆ ಸಲ್ಲಿಸದೇ ಇರುವದರಿಂದ ಗಡಿಪಾರಿಗೆ ಆದೇಶಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮದ್ಯಪಾನ ಮಾಡಿ ಶಾಲೆಯ ಬಾಗಿಲಿಗೆ ಮಲಗಿದ ; ಮುಖ್ಯಗುರು ಅಮಾನತು
ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗಿರುವ ದೂರುಗಳ ಮೇಲೆ ಚಾಮರಾಜನಗರದ ಹನೂರು ತಾಲೂಕಿನ ರಾಮಪುರು ಠಾಣೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ.
