ಬೊಲೆರೋ ವಾಹನ ಪಲ್ಟಿಯಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಯಚೂರು ತಾಲೂಕಿನ ಚಂದ್ರಬಂಡ ಗ್ರಾಮದ ಬಳಿ ನಡೆದಿದೆ. ಗಣಮೂರು ಗ್ರಾಮದ ನಿವಾಸಿ ಹೊನ್ನಪ್ಪ ಮೃತ ವಿದ್ಯಾರ್ಥಿ.
ಗಣಮೂರು ಗ್ರಾಮದಿಂದ ಚಂದ್ರಬಂಡಾ ಗ್ರಾಮಕ್ಕೆ ಮಕ್ಕಳು ಸುಮಾರು 4 ಕಿಮೀ ವರೆಗೆ ನಡೆದುಕೊಂಡು ಹೋಗಬೇಕು. ಸರಿಯಾದ ಸಮಯಕ್ಕೆ ಬಸ್ ಸಿಗದ ಕಾರಣ ಮಕ್ಕಳು ಬೇರೆ ಬೇರೆ ವಾಹನಗಳ ಮೊರೆ ಹೋಗುತ್ತಾರೆ. ರಸ್ತೆ ಸರಿಯಿಲ್ಲದ ಕಾರಣ ಬೊಲೆರೋ ವಾಹನ ಪಲ್ಟಿಯಾಗಿದೆ. ರಸ್ತೆ ನಿರ್ವಹಣೆ ಸರಿಯಾಗಿ ಮಾಡಿಸಲು ಸಾಧ್ಯವಾಗದಿರುವ ಶಾಸಕರೇ ಈ ಘಟನೆಗೆ ನೇರ ಹೊಣೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಘನತ್ಯಾಜ್ಯ ಸಂಗ್ರಹ ಘಟಕ ಸ್ಥಳಾಂತರಕ್ಕೆ ಸಿಪಿಐಎಂಎಲ್ ಒತ್ತಾಯ
ಗ್ರಾಮೀಣ ಭಾಗದಲ್ಲಿ ರಸ್ತೆ ಸರಿಯಿಲ್ಲ ಎಂದು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಚುನಾವಣೆ ಸಮಯದಲ್ಲಿ ಮಾತ್ರ ಬಂದು ಆಶ್ವಾಸನೆ ನೀಡುವುದು ಮತ್ತೆ ಹಿಂತಿರುಗಿ ನೋಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
