ಕೈ ಬೆರಳು ಸುಟ್ಟ ಹಿನ್ನಲೆಯಲ್ಲಿ ರಾಯಚೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ 9 ವರ್ಷದ ಬಾಲಕ ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಪತ್ತೆಯಾದ ಬಾಲಕ ರಾಯಚೂರು ತಾಲ್ಲೂಕಿನ ಜುಲಮಗೇರಾ ತಾಂಡದ ನಾಗಲಕ್ಷ್ಮಿ ಅವರ ಪುತ್ರ 9 ವರ್ಷದ ವಿಷ್ಣುನಾಯಕ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಮೊಬೈಲ್ ಚಾರ್ಜಿಂಗ್ ಇಟ್ಟು ನೋಡುತ್ತಿದ್ದ ಸಮಯದಲ್ಲಿ ವಿದ್ಯುತ್ ಸ್ಪರ್ಶಗೊಂಡ ಕಾರಣ ಕೈ ಬೆರಳು ಸುಟ್ಟು ಗಾಯಗೊಂಡಿದ್ದರಿಂದ ಕಳೆದ ಜೂ.17 ರಂದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
ಜೂನ್ 21 ರಂದು ರಾತ್ರಿ ಆಸ್ಪತ್ರೆ ಮಂಚದ ಮೇಲೆ ಮಲಗಿದ್ದ ಬಾಲಕ 22 ರಂದು ಬೆಳಗಿನ ಜಾವದ ವೇಳೆಗೆ ನಾಪತ್ತೆಯಾಗಿದ್ದಾನೆ. ಇದರಿಂದ ಆತಂಕಗೊಂಡ ಬಾಲಕನ ತಾಯಿ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.
ದೂರು ದಾಖಲಿಸಿ ವಾರ ಕಳೆದರೂ ಬಾಲಕನ ಪತ್ತೆಯಾಗದೇ ಇರುವುದು ತಾಯಿಯನ್ನು ಇನ್ನಷ್ಟು ಆತಂಕಕ್ಕೆ ದೂಡಿದ್ದು, ತಾಯಿ ಮಗನ ಫೋಟೋ ಹಿಡಿದು ಹುಡುಕಾಟ ನಡೆಸಿದ್ದಾರೆ.
ಮಗನನ್ನ ದಾಖಲಿಸಿದ್ದ ರಿಮ್ಸ್ ಆಸ್ಪತ್ರೆಯ ವಾರ್ಡ್‌ಗೆ ಆಗಾಗ ಬಂದು ಮಗನನ್ನ ಹುಡುಕುತ್ತಲೇ ಇದ್ದಾರೆ. ಜಿಲ್ಲಾಸ್ಪತ್ರೆ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯವೇ ಮಗ ಕಾಣೆಯಾಗಲು ಕಾರಣ ಎಂದು ತಾಯಿ ಆರೋಪಿಸಿದ್ದಾರೆ. ಆಸ್ಪತ್ರೆ ಸಿಸಿ ಕ್ಯಾಮೆರಾಗಳು ಹಾಳಾಗಿದ್ದು ಬಾಲಕನ ಚಲನವಲನ ಸೆರೆಯಾಗಿಲ್ಲ. ಪೊಲೀಸರು ಹುಡುಕಾಟ ಮುಂದುವರೆಸಿರುವುದಾಗಿ ಹೇಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿ ಆದೇಶ
