ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನನ್ನೇ ತಮ್ಮಂದಿರು ಕೊಂದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ.
ಸಂಜಯ್ ಕುರ್ಡಿಕರ್ ಮಾದಿಗ ಕೊಲೆಯಾದ ವ್ಯಕ್ತಿ. ಕುರ್ಡಿ ಗ್ರಾಮದ ಹೊರವಲಯದ ದೇವಿ ದೇವಸ್ಥಾನದ ಹತ್ತಿರ ಆಸ್ತಿ ವಿಚಾರಕ್ಕೆ ತಮ್ಮಂದಿರು ರಾಡ್‌ನಿಂದ ಹೊಡೆದು ಅಣ್ಣನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಅಣ್ಣ ತಮ್ಮಂದಿರ ಭಾಗದ ಸಂಬಂಧ ಸಣ್ಣ ಪುಟ್ಟ ಜಗಳ ನಡೆಯುತ್ತಿತ್ತು. ಆಸ್ತಿ ಸಂಬಂಧ ಸಂಜಯ್, ತನ್ನ ಪಾಲಿನ ಹಕ್ಕಿಗಿ ಕೋರ್ಟ್ ಮೆಟ್ಟಿಲೇರಿದ್ದ. ಇದನ್ನು ಸಹಿಸದೆ ತಮ್ಮಂದಿರು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
