ಪಿಸ್ತೂಲು ಟ್ರಯಲ್ ನೋಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ರಾಯಚೂರು ನಗರದ ಎಚ್‌ಆರ್‌ಬಿ ಲೇಔಟ್‌ನಲ್ಲಿ ನಡೆದಿದೆ.
ಮಹಮ್ಮದ್ ಸೊಹೆಲ್ (28) ಗಾಯಗೊಂಡ ಯುವಕ. ಸೊಹೆಲ್ ಸ್ನೇಹಿತ ಜಿಯಾ ಸೌದಾಗರ ಮನೆಗೆ ಹೋಗಿದ್ದ. ಜಿಯಾ ಸೌದಾಗರ ತನ್ನ ಮನೆಯಲ್ಲಿದ್ದ ಪಿಸ್ತೂಲನ್ನು ಸೊಹೆಲ್‌ಗೆ ತೋರಿಸಿದ್ದಾನೆ ಎನ್ನಲಾಗಿದೆ. ಆಗ ಪಿಸ್ತೂಲ್‌ನಲ್ಲಿ ಗುಂಡುಗಳನ್ನು ಹಾಕಿ ಟ್ರಯಲ್ ಮಾಡುವಾಗ ಆಕಸ್ಮಿಕ ಗುಂಡುಗಳು ಹಾರಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಪೊಲೀಸರು ಪಿಸ್ತೂಲ್ ಪರವಾನಿಗೆ ಇದೆಯೇ ಇಲ್ಲ ಎಂದು ಪರಿಶೀಲನೆ ನಡೆಸಿದ್ದಾರೆ. ಸದರ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ರಾಯಚೂರು | ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆ ವಿರುದ್ಧ ಮೇ.14 ಬೆಂಗಳೂರಿನಲ್ಲಿ ಬೃಹತ್ ಹೋರಾಟ : ಎಂ.ಶಶಿಧರ್