ಬೀದಿಬದಿ ವ್ಯಾಪಾರಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಹಾ ನಗರ ಪಾಲಿಕೆ ಉಪ ಅಯುಕ್ತರಿಗೆ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ಮನವಿ ಸಲ್ಲಿಸಿದರು.
ನಗರದ ಲಿಂಗಸೂಗೂರು ರಸ್ತೆ ಸೇರಿದಂತೆ ವಿವಿಧೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಸುಮಾರು 5 ತಿಂಗಳು ಗತಿಸಿದರೂ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಒತ್ತಾಯಿಸಿದರು.ಪಾಲಿಕೆ ತೆರವುಗೊಳಿಸಲಾಗಿತ್ತು, ಈಗಾಗಲೇ ೫ ತಿಂಗಳು ಗತಿಸಿದೆ, ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ತೆರವುಗೊಂಡಿದ್ದರಿಂದ ವ್ಯಾಪಾರಿಗಳ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆ ಉಂಟಾಗಿದೆ. ಜೀವನ ನಡೆಸುವುದು ಕಷ್ಟಕರವಾಗಿದೆ.ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಭರವಸೆ ನೀಡಿದ್ದರು.ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಪಾಲಿಕೆ ಬೀದಿಬದಿಯಲ್ಲಿ ಸುಗಮವಾಗಿ ವ್ಯಾಪಾರ ಮಾಡಿಕೊಳ್ಳಲು ಸ್ಥಳ ನಿಗದಿಪಡಿಸಬೇಕು, ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಕಾಯ್ದೆ ಸಂಪೂರ್ಣ ಜಾರಿಯಾಗಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಕ್ತಿನಗರ ಶಾಖೋತ್ಪನ್ನ ಘಟಕದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ಬೀದಿಬದಿ ವ್ಯಾಪಾರಸ್ಥರಿಗೆ ವಿವಿಧ ಯೋಜನೆಗಳನ್ನು ಜೀವನಕ್ಕೆ ದಾರಿಯಾಗುವಂತೆ ವ್ಯವಸ್ಥೆ ಒದಗಿಸಿಕೊಡಬೇಕು, ಅಂಗಡಿ ನಿರ್ಮಾಣ ಮಾಡಿ ಟೆಂಡರ್, ಹರಾಜು ಮಾಡದೇ ಬೀದಿಬದಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಬೇಕು, ವ್ಯಾಪಾರಿಗಳೂ ಸಹ ಪಾಲಿಕೆಗೆ ಪಾವತಿ ಮಾಡಬೇಕಾದ ಅನುದಾನವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಿ.ಅಮರೇಶ, ಅಧ್ಯಕ್ಷ ಶೇಖ್ ಹುಸೇನ್ ಬಾಷಾ, ಉಪಾಧ್ಯಕ್ಷ ಮೌನುದ್ದಿನ್, ಬೀಮಾಶಂಕರ, ಕರಿಮುಲ್ಲಾ, ರಾಮು, ಮಾರೆಪ್ಪ, ಸೇರಿದಂತೆ ಅನೇಕರು ಇದ್ದರು.
