ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹುಣಕುಂಟಿ ಕ್ರಾಸ್ ಬಳಿ ನಡೆದಿದೆ.
ಬಸನಗೌಡ ಪೊಲೀಸ್ ಪಾಟೀಲ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಸ್ಕಿ ತಾಲೂಕಿನ ತಲೇಖಾನ್ ಬಳಿಯ ಯಾರದೊಡ್ಡಿ ನಿವಾಸಿ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಮೈಕ್ರೋ ಫೈನಾನ್ಸ್ ಕಿರುಕುಳ; ರೈತ ಆತ್ಮಹತ್ಯೆ
ಯಾದಗಿರಿ ಜಿಲ್ಲೆಯ ಸುರಪುರದಿಂದ ದಾವಣಗೆರೆಗೆ ಹೊರಟಿದ್ದ ಕಾರಿಗೆ ಮುದಗಲ್‌ನಿಂದ ಲಿಂಗಸೂಗೂರು ಬರುತ್ತಿದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಲಿಂಗಸೂಗೂರು ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
