ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರ್ ಪಲ್ಟಿಯಾಗಿ ಸ್ಥಳದಲ್ಲಿ ಓರ್ವ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡ ಘಟನೆ ಲಿಂಗಸುಗೂರು ತಾಲ್ಲೂಕಿನ ಅಮರೇಶ್ವರ ಕ್ರಾಸ್‌ನಿಂದ ದೇವರಭೂಪುರ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ನಡೆದಿದೆ.
ಮೃತನನ್ನು ತಿಮ್ಮನಗೌಡ ಶಂಕರಗೌಡ (32) ಎಂದು ಗುರುತಿಸಲಾಗಿದೆ.ಇನ್ನೋರ್ವ ಅಮರೇಶ ಯುವಕನಿಗೆ ಕಿವಿ , ಕಾಲಿಗೆ ಪೆಟ್ಟು ಬಡಿದು ಗಂಭೀರ ಗಾಯಗೊಂಡಿದ್ದಾರೆ.
ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗಿ ಬರುವಾಗ ಮಧ್ಯಾಹ್ನ 4 ಗಂಟೆ ಸುಮಾರು ಅಮರೇಶ್ವರ ಕ್ರಾಸ್‌ನಿಂದ ದೇವರಭೂಪುರ ಗ್ರಾಮಕ್ಕೆ ಹೋಗುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಾರಕಾಸ್ತ್ರದಿಂದ ವ್ಯಕ್ತಿಯ ಕೊಲೆ
ಓರ್ವ ಗಾಯಾಳುವನ್ನು ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
