ಕಾರು-ಟಿಪ್ಪರ್ ಮುಖಾಮುಖಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ತೆಲಂಗಾಣ ರಾಜ್ಯದ ಮಹೆಬೂಬ್ ನಗರ ಜಿಲ್ಲೆಯಲ್ಲಿ ನಡೆದಿದೆ.
ಈ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪ್ರಜಾವಾಣಿ ಪತ್ರಕರ್ತ ಬಸವರಾಜ್ ನಂದಿಕೋಲಮಠ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗಂಭೀರ ಗಾಯಗೊಂಡ ಚಿನ್ನಯ್ಯ ತಾತ, ಮಲ್ಲಿಕಾರ್ಜುನ್, ಭಗವಾನ್, ಅಮರೇಶ್ ಮತ್ತು ಮಲ್ಲಣ್ಣ ಅವರನ್ನು ಮಹೆಬೂಬ್‌ನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ರಸ್ತೆ ಬದಿಯ ಮರಕ್ಕೆ ಬೈಕ್ ಡಿಕ್ಕಿ, ಸವಾರ ಸಾವು
ಅಪಘಾತ ಘಟನೆಯಲ್ಲಿ ಕರ್ನಾಟಕದ ಲಿಂಗಸೂಗೂರು ನಿವಾಸಿಗಳಾದ ಆರು ಮಂದಿ ಕೊಲನಪಾಕಕ್ಕೆ ತೆರಳಿ ಹಿಂದಿರುಗುವ ವೇಳೆ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಪುರಂ ಬಳಿ ಅಪಘಾತ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಎರ್ಟಿಗಾ ಕಾರು ಅಲಕನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
