ದೌರ್ಜನ್ಯ, ಜಾತಿ ಆಧಾರಿತ ಬೇಧಭಾವ ನಮ್ಮ ಸಮಾಜದ ಮೇಲೆ ಕಳೆಗುಂದುವ ಕಳಂಕ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ದಲಿತ ಸಂರಕ್ಷ ತಾಲ್ಲೂಕು ಮುಖಂಡ ಮೋಹನ್ ಗೋಸ್ಲೆ ಹೇಳಿದರು.
ಲಿಂಗಸೂಗೂರು ನಗರದ ಅಂಬೇಡ್ಕರ್ ಭವನದಲ್ಲಿ ಚಿತ್ರನಾಳ ಗ್ರಾಮದ ದಲಿತ ಸಂರಕ್ಷ ಸಂಘದ ಗ್ರಾಮ ಘಟಕ ಉದ್ದೇಶಿಸಿ ಮಾತನಾಡಿದರು.
ದಲಿತರ ಹಕ್ಕುಗಳ ಸಂರಕ್ಷಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ದೌರ್ಜನ್ಯ ವಿರೋಧಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಯುವಕರು ಬದಲಾವಣೆ ಶಕ್ತಿ. ಈ ಹೋರಾಟದಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಕಾಲದ ಅವಶ್ಯಕತೆಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿ: ಆಗಸ್ಟ್ 11ರಿಂದ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಧರಣಿ
ಈ ವೇಳೆ ದಲಿತ ಮುಖಂಡರು ಅಮರೇಶ ನಾಯಕ, ಶಶಿಧರ ಕೆಸರಟ್ಟಿ, ಮಲ್ಲಿಕಾರ್ಜುನ , ಬಸವರಾಜ ಗೋಸ್ಲೆ ಕರಡಕಲ್, ರಮೇಶ ಮ್ಯಾಗಮನಿ ,ದಲಿತ ಸೇನೆ ಬಸವರಾಜ ಗೋಸ್ಲೆ, ತೋಮೆಶ ಚಿತ್ರನಾಳ, ದುರುಗಪ್ಪ ಚಿತ್ರನಾಳ, ಉಪಾಧ್ಯಕ್ಷ ಸಂತೋಷ, ಪ್ರಧಾನ ಕಾರ್ಯದರ್ಶಿ ಗುದ್ದಪ್ಪ , ಕಾರ್ಯಧ್ಯಕ್ಷ ಸಂಗಮೇಶ, ಖಜಾಂಚಿ ವೆಂಕಟೇಶ್, ಸಹ ಕಾರ್ಯದರ್ಶಿ ಹೋಳಿಪ್ಪ ಇನ್ನಿತರರು ಉಪಸ್ಥಿತರಿದ್ದರು.
