ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ಮತ್ತು ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ ವಿರುದ್ಧ ಅಸಂವಿಧಾನ ಪದವನ್ನು ಬಳಸಿ ಹೇಳಿಕೆ ನೀಡಿರುವ ಎನ್ ರವಿಕುಮಾರ ಇವರಿಬ್ಬರ ವಿಧಾನ ಪರಿಷತ್ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಡಿ ಜಿ ಸಾಗರ ಬಣ) ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆ ಒಳಗೆ ಹಾಗೂ ಹೊರಗೆ ಆರ್ ಎಸ್ ಎಸ್, ಬಿಜೆಪಿ,ಮನುವಾದಿ ಸಂಘಟನೆ ವಿರುದ್ಧ ಸಿಂಹಸ್ವಪ್ನವಾಗಿ ತಿರುಗೇಟು ನೀಡುವುದರಲ್ಲಿ ಕಾಡುತ್ತಿದ್ದಾರೆ.ಇದನ್ನು ಸಹಿಸದೆ ಯಾವುದೇ ಅಸ್ತ್ರವಿಲ್ಲದೆ ವೈಯಕ್ತಿಕ ನಿಂದನೆಗೆ ಇಳಿದಿದ್ದು ತೀವ್ರ ಖಂಡನೀಯ ಎಂದು ಆಗ್ರಹಿಸಿದರು.
ಅಂಬೇಡ್ಕರ್ ದ್ರೋಹಿ, ದಲಿತ ಸಮೂದಾಯ ವಂಚಕ “ಛಲವಾದಿ” ಅಲ್ಲ “ಮನುವಾದಿ ನಾರಾಯಣಸ್ವಾಮಿ”ಅವರು ಅಧಿಕಾರ ಆಸೆಗಾಗಿ ಬಿಜೆಪಿ ಪಕ್ಷ ಹೇಳಿದ ತಾಳಕ್ಕೆ ಕುಣಿದು ಅಸಾಂವಿಧಾನಿಕವಾಗಿ ವರ್ತಿಸುತ್ತಿದ್ದಾರೆ.ಯಾವುದೇ ವಿಷಯವಿಲ್ಲದೆ ಸುಖಾಸುಮ್ಮನೆ ಖರ್ಗೆ ಕುಟುಂಬದ ವಿರುದ್ಧ ಸುಳ್ಳು ಆಪಾದನೆ ಹೊರಿಸುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತಾ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ, ಸಮೂದಾಯಗಳಲ್ಲಿ ವಿಷ ಬಿತ್ತಿ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರ್ ಬೈಕ್ ನಡುವೆ ಡಿಕ್ಕಿ ; ಇಬ್ಬರ ಸಾವು
ಇತ್ತೀಚಿಗೆ ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಡೆದ ಪ್ರತಿಭಟನೆ ರ್ಯಾಲಿ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಇವರು ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತದೆಂದು ಅಗೌರವದಿಂದ ಅಸಂವಿಧಾನ ಪದವನ್ನು ಬಳಸಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಹುದ್ದೆಯ ಘನತೆಗೆ ಧಕ್ಕೆ ತಂದಿರುವ ಕಾರಣ ವಿಧಾನ ಪರಿಷತ್ ಸದಸ್ಯತ್ವದಿಂದ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಮುಖಂಡ ಮಂಜುನಾಥ ಗಾಂಧಿನಗರ ,ಶರಣಪ್ಪ ಹಂಚಿನಾಳ ,ಪರಮೇಶ ,ಮಲ್ಲೇಶ ಮ್ಯಾಗೇರಿ ,ಮಾರೆಪ್ಪ ಹರವಿ ,ಹನುಮಂತ ಗುಂಜಳ್ಳಿ ಇನ್ನಿತರರು ಹಾಜರಿದ್ದರು.
