ಮಳೆಗಾಲದ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಕಂದಕ ಸ್ವಚ್ಚತಾ ಕಾರ್ಯ ಮಾಡಲಾಗಿದ್ದು, ಸ್ವಚ್ಚತೆಗೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕು. ಆಗ ಮಾತ್ರ ನಗರ ಸ್ವಚ್ಛತೆಯಾಗಿರುತ್ತದೆ ಎಂದು ಮಹಾನಗರ ಪಾಲಿಕೆ ಹಿರಿಯ ಸದಸ್ಯ ಜಯಣ್ಣ ಮನವಿ ಮಾಡಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ಪಾಲಿಕೆ ಸಕರಾತ್ಮಕ ಬೆಳೆವಣಿಗೆಗೆ ಮುಂದಾಗಿದೆ.ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ನಗರದ ಐತಿಹಾಸಕ ಕಂದಕದ ಸ್ವಚ್ಚತೆಗೆ ಮುಂದಾಗಿದ್ದು ಸಾರ್ವಜನಿಕರು ಆಂದೋಲನ ರೀತಿಯಲ್ಲಿ ಸ್ವಚತೆಗೆ ಬೆಂಬಲಿಸಿ ನಮ್ಮ ನಗರ, ಪಾಲಿಕೆ ನಮ್ಮದು ಎಂಬ ಅಭಿಮಾನದಿಂದ ಕಸ ವಿಲೇವಾರಿಗೆ ಸಹಕರಿಸಬೇಕೆಂದು ಹೇಳಿದರು.
ನಗರದ ಮಾರುಕಟ್ಟೆಗಳೂ ಸೇರಿದಂತೆ ಎಲ್ಲಡೆಯೂ ಕಸವನ್ನು ಎಲ್ಲೆಂದರಲ್ಲಿ ಹಾಕದೇ ನಗರವನ್ನು ಸ್ವಚ್ಚತೆಗೆ ತ್ಯಾಜ್ಯ ವಿಲೇವಾರಿಗೆ ಸಹಕರಿಸಬೇಕು.ಈ ಸ್ವಚ್ಚತಾ ಕಾರ್ಯಕ್ಕೆ ಸಮುದಾಯವು ಕೂಡ ಸಹಕಾರ ನೀಡಬೇಕೆಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದೇಶದಲ್ಲಿ ಇನ್ನೂ ಸ್ಲಂಗಳು ಜೀವಂತ,ಸರ್ಕಾರಗಳು ವಿಫಲ ; ವಸಂತ ಕುಮಾರ
ಈ ವೇಳೆ ಪಾಲಿಕೆ ಆಯುಕ್ತರಾದ ಜುಬಿನ್ ಮಹೋಪಾತ್ರ, ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಸಾಜೀದ ಸಮೀರ್ , ಸದಸ್ಯ ಜಿಂದಪ್ಪ.ತಿಮ್ಮಪ್ಪ ನಾಯಕ, ಹರಿಬಾಬು ರಾಂಪುರು, ನರಸಿಂಹಲು ಮಾಡಗಿರಿ, ಬಸವರಾಜ ಪಾಟೀಲ್ ಅತ್ತನೂರು ಸೇರಿದಂತೆ ಪಾಲಿಕೆ ತಾಂತ್ರಿಕ ವಿಭಾಗದ ಅಧಿಕಾರಿಗಳು,ಸಿಬ್ಬಂದಿಗಳಿದ್ದರು.
