ಕಂದಾಯ ಇಲಾಖೆ ಎಲ್ಲಾ ದಾಖಲೆಗಳನ್ನು ಗಣಕೀರಣಗೊಳಿಸಿ ಮುಂದಿನ ಆರು ತಿಂಗಳಲ್ಲಿ ಜನರಿಗೆ ಆಗುತ್ತಿರುವ ತೊಂದರ ನಿವಾರಿಸಲು ಯೋಜನೆ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳ 31ತಾಲೂಕಗಳಲ್ಲಿ ಮೊದಲ ಹಂತದಲ್ಲಿ ಕಂದಾಯ ದಾಖಲೆಗಳನ್ನು ಡಿಜಿಲೀಕರಣಗೊಳಿಸುವ ಯೋಜನೆ ರೂಪಿಸಲಾಗಿದೆ. ನಂತರದ ದಿನಗಳಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳ, ತಾಲೂಕಗಳ ಜಮೀನಿನ ಮುಟ್ಯೇಷನ್ ಸೇರಿದಂತೆ, ಭೂ ದಾಖಲೆಗಳು ಲಭ್ಯವಾಗುವಂತೆ ಮಾಡಲಾಗುತ್ತದೆ.
ಬೆಳೆ ಸಮೀಕ್ಷೆ ಸೇರಿದಂತೆ ಭೂ ಸರ್ವೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಸಾರ್ವಜನಿಕರಿಗೆ ತೀವ್ರತೊಂದರೆಯಾಗುತ್ತಿದ್ದು ಶಾಶ್ವತ ಪರಿಹಾರ ಒದಗಿಸಲು ಕೆಲಸ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಬರ ಮತ್ತು ಅತಿವೃಷ್ಟಿಯಾದಾಗ ಪರಿಹಾರ ವಿತರಣೆಯಲ್ಲಿ ಸಾಕಷ್ಟು ನ್ಯೂನತೆಗಳಾಗುತ್ತಿರುವ ದೂರುಗಳು ಕೇಳಿಬರುತ್ತಿವೆ.ಯಾರದೋ ಜಮೀನಿನ ಪರಿಹಾರ ಇನ್ಯಾರಿಗೋ ನೀಡುವದು, ಹಾನಿಯಾದ ಬೆಳೆಯೇ ಬೇರೆ, ನಷ್ಟ ಇನ್ಯಾವದೋ ಬೆಳೆಯದು ನೀಡಲಾಗುತ್ತಿದೆ.
ಬೆಳೆ ಸಮೀಕ್ಷ ನಡೆಸಿದರೂ ಶೇ.20ರಷ್ಟು ಅರ್ಹರಿಗೆ ಪರಿಹಾರ ದೊರೆಯದೇ ಹೋಗುತ್ತಿರುವ ದೂರುಗಳ ಹಿನ್ನಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಬೆಳೆ ನಷ್ಟ ಪರಿಹಾರ ನೀಡಲು 4663 ಕೋಟಿ ರೂ. ಹಣd ಅವಶ್ಯಕತೆಯಿದೆ. ಕುಡಿಯುವ ನೀರು, ಬೆಳೆ ನಷ್ಟ ಸೇರಿ ಇತರೆ ಅವಶ್ಯಕತೆಗಳಿಗೆ 18,175 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಪರಿಹಾರ ಕೇಳಲಾಗಿದೆ. ಕೇಂದ್ರ ಇಂದಿಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಗಳನ್ನು ಬದಲಿಸಿ ರೈತರಿಗೆ ವಾಸ್ತವಿಕ ಪರಿಹಾರ ಒದಗಿಸಲು ಪ್ರಧಾನಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಮಾತ್ರ ನಿಯಮಗಳನ್ನು ಪರಿಷ್ಕರಿಸಲು ಅಧಿಕಾರವಿದೆ ಎಂದರು.
ಈಸಂದರ್ಭದಲ್ಲಿ ಶಾಸಕ ಹಂಪಯ್ಯನಾಯಕ, ಬಸನಗೌಡ ದದ್ದಲ್, ಕಂದಾಯ ಅಧಿಕಾರಿ ಸುನೀಲ್‌ಕುಮಾರ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಸೇರಿ ಇತರರಿದ್ದರು.