ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮಹಿಳೆಯರ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶರಣಮ್ಮ ಕಾಮರೆಡ್ಡಿಬಸ ಆರೋಪಿಸಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹೀರೆಮಠ ಕೊಲೆ ಪ್ರಕರಣ ನಡೆದಿದ್ದು ಜವಬ್ದಾರಿಯುತವಾಗಿ ವರ್ತಿಸುವಲ್ಲಿ ಕಾಂಗ್ರೆಸ್ ಪಕ್ಷ ವೈಫಲ್ಯವಾಗಿದೆ ಎಂದರು.
ಘಟನೆ ಕುರಿತಂತೆ ಸಾಂತ್ವಾನ ಹೇಳಬೇಕಿದ್ದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಉಡಾಫೆಯಾಗಿ ಮಾತನಾಡಿ ಅಪಮಾನಿಸಿದ್ದಾರೆ. ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆವಿಧಿಸಬೇಕೆಂದು ಆಗ್ರಹಿಸಿದರು. ಚಿತ್ರನಟಿ ಹರ್ಷಿತಾ ಸೇರಿದಂತೆ ಅನೇಕ ಮಹಿಳೆಯರಿಗೆ ಕಿರುಕುಳ, ಕೊಲೆ ಬೆದರಿಕೆಯಂತಹಘಟನೆಗಳು ನಡೆದಿದ್ದರೂ ರಾಜ್ಯ ಸರ್ಕಾರ ನಿಯಂತ್ರಣ ಕ್ರಮ ಕೈಗೊಂಡಿಲ್ಲ ಎಂದರು.
ಹಾವೇರಿ ಜಿಲ್ಲೆಯಲ್ಲಿ ಮಹಿಳೆಮೇಲೆ ಅತ್ಯಾಚಾರ, ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿರುವ ಪ್ರಕರಣ ನಡೆದಿದೆ. ವಿಧಾನಸೌಧದಲ್ಲಿಯೇ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಹಾಕಿದರೂ ಕ್ರಮಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ವೈಫಲ್ಯ ಮುಚ್ಚಿ ಕೋಳ್ಳಲು ಸುಳ್ಳು ಆರೋಪ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಲಲಿತಾ ಕಡಗೋಳ, ಸುಮಿತಾ ಶಾಸ್ತ್ರಿ, ಸುಲೋಚನಾ ಆಲ್ಕೂರು, ವಾಣಶ್ರೀ, ನಾಗವೇಣ, ಸುಮಾ ಗಸ್ತಿ, ಸೀತಾನಾಯಕ ಉಪಸ್ಥಿತಿದ್ದರು.
