ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿಲ್ಲ. ತಮಗೆ ತಾವೇ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ , ರಾಜೀವಗಾಂಧಿ ಅವರು ಭಾರತ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದೇ ಅವಮಾನ ಮಾಡಿದ ಕಾಂಗ್ರೆಸ್ ನಿಜವಾದ ಸಂವಿಧಾನ ವಿರೋಧಿ ಶಾಸಕ ಬಸನಗೌಡ ಪಾಟೀಲ್ ತಿಳಿಸಿದರು.
ರಾಯಚೂರಿನ ಅತ್ತನೂರ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ವಕ್ಫ್ ಭೂಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಸಂವಿಧಾನ ವಿರೋಧಿ ಎಂದು ಹೇಳುವ ಕಾಂಗ್ರೆಸ್ ನಾಯಕರೇ ಸಂವಿಧಾನ ವಿರೋಧಿಗಳು, ಸಂವಿಧಾನ ಬರೆದ ಬಾಬಾ ಸಾಹೇಬರಿಗೆ ಅವಮಾನ ಮಾಡಿದ್ದಾರೆ. ಸತ್ತಾಗ ಜಾಗ ನೀಡಲಿಲ್ಲ. ಇದ್ದಾಗ ಸರಿಯಾಗಿ ನಡೆದುಕೊಂಡಿಲ್ಲ ಎಂದು ದೂರಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಅನೇಕ ನಾಯಕರು ಲೋಕಸಭೆ ಚುನಾವಣೆಗೂ ಮೊದಲು ಅಪಪ್ರಚಾರ ಮಾಡಿದ್ದರು. ಆದರೆ, ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಹಾಗೂ ನರೇಂದ್ರ ಮೋದಿ ಅವರ 10 ವರ್ಷದ ಆಡಳಿತದಲ್ಲಿ ಸಂವಿಧಾನ ಬದಲಾಯಿಸಿದ್ದಾರಾ? ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದೇ ಅವಮಾನ ಮಾಡಿದ ಕಾಂಗ್ರೆಸ್ ನಿಜವಾದ ಸಂವಿಧಾನ ವಿರೋಧಿ ಎಂದರು.
ರಾಯಚೂರು ನಗರದ ಅತ್ತನೂರ ಸಭಾ ಮಂದಿರದಲ್ಲಿ ಇಂದು ವಿವಿಧ ತಾಲ್ಲೂಕುಗಳ ರೈತರು ತಮ್ಮ ಜಮೀನುಗಳ ಉತಾರೆಯಲ್ಲಿ ವಕ್ಪ್ ಎಂದು ನಮೂದು ಮಾಡಿರುವ ಕುರಿತಂತೆ ಉತಾರೆಗಳ ಸಹಿತ ವಕ್ಫ್ ವಿರುದ್ಧದ ನಮ್ಮ ಜನಾಂದೋಲ ಹೋರಾಟ ತಂಡವನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ನಮ್ಮ ಆಸ್ತಿಯನ್ನು ವಕ್ಫ್ ಕಬಳಿಸಿಕೊಂಡರೆ,… pic.twitter.com/P9vFVa3Tr7
— Basanagouda R Patil (Yatnal) (@BasanagoudaBJP) November 27, 2024
ಕಳೆದ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಈ ಬಾರಿ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಿಗೆ ಮುಖಭಂಗವಾಗಿದೆ. ದೇಶದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ವಿರುದ್ಧ ವಕ್ಫ್ ನಡೆಯುತ್ತಿದ್ದು ಸಚಿವ ಜಮೀರ್ ಅಹ್ಮದ್ ವಕ್ಫ್ ಆಸ್ತಿ ನಮ್ಮ ಅಪ್ಪನ್ ಆಸ್ತಿ ಎಂದು ಮಾತನಾಡುತ್ತಾರೆ. ಇದರ ವಿರುದ್ಧ ಬೀದಿಗಿಳಿದ ಹೋರಾಟ ಮಾಡಬೇಕಿದೆ ಎಂದರು.
ಬಿಜೆಪಿ ವಿರುದ್ದ ಸುಳ್ಳು ಕಂತೆ ಸೃಷ್ಟಿಸಲಾಗುತ್ತಿದೆ. ಈಗ ಯಾವ ಎಲೆಕ್ಷನ್ ಇಲ್ಲ. ಆದರೆ ರೈತರು, ಮಠ,ಮಂದಿರಗಳ ವಕ್ಫ್ ಎಂದು ನಮೂದಿಸುವ ಕುತಂತ್ರದ ವಿರುದ್ದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನಾನು ಸೇರಿದಂತೆ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ನಾಲ್ಕೈದು ಬಾರಿ ಶಾಸಕರು, ಸಚಿವರಾಗಿದ್ದೇವೆ. ನಮಗೇನು ಅಧಿಕಾರದ ಹುಚ್ಚು ಹಿಡಿದಿಲ್ಲ. ಈಗ ಚುನಾವಣೆಯೂ ಇಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ , ಪಕ್ಷವನ್ನು ತಳಮಟ್ಟದಿಂದ ಗಟ್ಟಿಯಾಗಿ ಕಟ್ಟುವುದಕ್ಕೆ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಎಲ್ಲ ಬೆಳೆಗಳಿಗೆ ಕಾನೂನುಬದ್ಧ ಕನಿಷ್ಠ ಬೆಂಬಲ ಬೆಲೆ ಸಿಗಲು ಆಗ್ರಹಿಸಿ ಪ್ರತಿಭಟನೆ
ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಸಂಸದ ಬಿ.ವಿ. ನಾಯಕ, ಮುಖಂಡರಾದ ರಮಾನಂದ ಯಾದವ್, ಆಂಜನೇಯ, ನರಸಪ್ಪ ಯಕ್ಲಾಸಪೂರ, ಕೊಟ್ರೇಶಪ್ಪ ಕೋರಿ, ಹರೀಶ, ಸಂತೋಷ, ಶಶಿಧರ ಮಸ್ಕಿ, ಭೀಮೇಶ, ಬಂಡೇಶ ವಲ್ಕಂದಿನ್ನಿ ಉಪಸ್ಥಿತರಿದ್ದರು.
