ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯ ಮಲ್ಲಪ್ಪ ಶಾಫ್ಟ್ ಹತ್ತಿರ ಚಿಂದಿ ಆಯಲು ಹೋಗಿ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಲಿಂಗಸುಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ನಡೆದಿದೆ.
ಅಮರೇಶ (18) ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ.ಯುವಕ ಗುರುಗುಂಟ ಗ್ರಾಮದ ನಿವಾಸಿ ಎನ್ನಲಾಗಿದೆ.
ಕಂಪನಿಯ ವ್ಯಾಪ್ತಿಯಲ್ಲಿ ಹಳೆ ಮನೆಗಳನ್ನು ತೆರವುಗೊಳಿಸಲು ಕೆಲಸ ನಡೆದಿತ್ತು. ಇನ್ನೂ ಹಾಗೇ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಹಾಗೆ ಬಿಟ್ಟಿದ್ದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪೊಲೀಸರ ಹಲ್ಲೆಯಿಂದ ಸಾವು ಆರೋಪ; ಪ್ರಕರಣ ಸಿಐಡಿ ಕೈಗೆ
ಕಾಮಗಾರಿ ಗುತ್ತಿಗೆದಾರನ ನಿರ್ಲಕ್ಷ್ಯ ಕಾರಣದಿಂದ ಯುವಕನ ಸಾವು ಸಂಭವಿಸಿದೆ,ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯ ಹೋರಾಟಗಾರರೂ ಆರೋಪಿಸಿದರು.
ಅಮರೇಶ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಕೂಡ ಒತ್ತಾಯಿಸಿದರು. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
