ಅನಿಲ ಸೋರಿಕೆಯಾಗಿ ಅಡುಗೆ ಸಿಲಿಂಡರ್ ಸ್ಪೋಟಗೊಂಡಿದ್ದು, ಐದು ಕುರಿಗಳು ಜೀವಂತವಾಗಿ ಸುಟ್ಟುಹೋಗಿವೆ. ಗುಡಿಸಲು ಕೂಡ ಭಸ್ಮವಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಗುಡಿಸಲಿನಲ್ಲೇ ಇದ್ದ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಯಚೂರು ಸಮೀಪನ ಏಗನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ನರಸಿಂಹಲು ಅವರು ಗುಡಿಸಲಿನಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ, ನರಸಿಂಹಲು ಮತ್ತು ಅವರ ಪತ್ನಿ ಗುಡಿಸಲಿನಲ್ಲಿಯೇ ಇದ್ದರು, ಸಿಲಿಂಡರ್ ಸ್ಪೋಟಗೊಳ್ಳುತ್ತಿದ್ದಂತೆಯೇ ಗುಡಿಸಲಿನಿಂದ ಹೊರ ಓಡಿ ಬಂದಿದ್ದು, ಅಪಾಯದಿಂದ ಬಜಾವಾಗಿದ್ದಾರೆ.
ಗುಡಿಸನಲ್ಲಿದ್ದ ಇಟ್ಟಿದ್ದ 40,000 ರೂ. ನಗದು, ಚಿನ್ನದ ಆಭರಣೆಗಳು ಹಾಗೂ ಆಹಾರ ಧಾನ್ಯಗಳು ಸುಟ್ಟು ಹೋಗಿವೆ. ಗುಡಿಸಲಿನ ಪಟ್ಟದಲ್ಲಿ ಕಟ್ಟಿದ್ದ ಕುರಿಗಳು ಜೀವಂತವಾಗಿ ಸುಟ್ಟುಹೋಗಿವೆ.
ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಹಾಸಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಗ್ರಾಮಕ್ಕೆ ತೆರಳಿ, ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಕಂದಾಯ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.