ವಿಶೇಷ ವರ್ಗದ ಸಮೂದಾಯ ಜನರಿಗೆ ವಸತಿ ಹಾಗೂ ನಿವೇಶನ ಹಂಚಿಕೆ ಮಾಡದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಯಚೂರಿನಲ್ಲಿ ದಲಿತ ಸಮರ ಸೇನೆ ಮತ್ತು ಡಿಎಸ್‌ಎಸ್ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಆಧಾರ್ ಕಾರ್ಡ್‌ಗಳನ್ನು ದಹಿಸಿ ಪ್ರತಿಭಟನೆ ನಡೆಸಿದ್ದಾರೆ.
“2014-15ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳಿಗೆ ಇಂದಿಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಅನೇಕ ಬಾರಿ ಪ್ರತಿಭಟನೆ, ಹೋರಾಟ ನಡೆಸಿ ಮನವಿ ಸಲ್ಲಿಸಿದರು ಯಾರು ಸ್ಪಂದಿಸುತ್ತಿಲ್ಲ. ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ” ಎಂದು ಕಿಡಿಕಾರಿದ್ದಾರೆ.
“ಆಡಳಿತ ವ್ಯವಸ್ಥೆ ನಿರ್ಲಕ್ಷ್ಯದಿಂದ ವಿಶೇಷ ವರ್ಗದಲ್ಲಿ ಬರುವ ವಿವಿಧ ಸಮೂದಾಯದ ಜನರಿಗೆ ಅನ್ಯಾಯವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯ ಸಂಚಾಲಕ ತಿಪ್ಪಣ್ಣ ಛಲವಾದಿ, ಜಿಲ್ಲಾಧ್ಯಕ್ಷ ನೀಲಕಂಠ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ನರಸಿಂಹಲು, ಎಲ್.ವಿ.ಸುರೇಶ, ಹನುಮೇಶ ಆರೋಲಿ, ಅನಿಲ್‌ಕುಮಾರ, ಕರಿಯಪ್ಪ, ಶರಣುಕುಮಾರ ,ಪಂಡಿತ್, ರಂಗಮ್ಮ, ಶಂಕರ ಸೇರಿದಂತೆ ನೂರಾರು ಮಹಿಳೆಯರು ಭಾಗಿಯಾದರು.
ವರದಿ : ಹಫೀಜುಲ್ಲ