ರಾಯಚೂರಿನಲ್ಲಿ ನಡೆಯಲಿರುವ 11ನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ತಾಯರಾಜ್ ಮರ್ಚಟ್ಹಾಳ್ ಹೇಳಿದರು.
ನಗರದ ಉದ್ಯಾನವನದ ಹತ್ತಿರದಲ್ಲಿರುವ ಶ್ರೀಮಾದರ ಚೆನ್ನಯ್ಯ ಗುರುಪೀಠ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತನ ಸರ್ವ ಪದಾಧಿಕಾರಿಗಳ ಜೊತೆ ಚರ್ಚಿಸಿ ಮಾತನಾಡಿದರು.
ತಾಲೂಕು ಮಟ್ಟದಲ್ಲಿಯೂ ಕೂಡ ಸಭೆಗಳು ನಡೆಸಿ ದಲಿತ ಸಾಹಿತ್ಯ ಸಮ್ಮೇಳನದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ತಳಮಟ್ಟದ ಗ್ರಾಮಿಣ ಭಾಗದ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವುದರಲ್ಲಿ ಎಲ್ಲರೂ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ದಲಿತ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 14 ,15 ರಂದು ಎರಡು ದಿನ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಈ ನಾಡಿನ ಸಾಹಿತಿಗಳು, ಕವಿಗಳು, ಹೋರಾಟಗಾರರು, ಚಿಂತಕರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಗದಗ | 2019ರ ಬಳಿಕ ಜಿಲ್ಲೆಯ ಆಸ್ತಿಗಳಲ್ಲಿ ವಕ್ಫ್ ಎಂದು ನಮೂದಿಸಿಲ್ಲ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸ್ಪಷ್ಟನೆ
ಸಭೆಯಲ್ಲಿ ದ.ಸಾ.ಪ ಕೋಶಾಧ್ಯಕ್ಷ ವೇದಿಕೆ ಸಮಿತಿಯ ನರಸಿಂಹಲು ರಾಂಪೂರ,ಪಿ.ಏನ್. ಕುಮಾರ್, ಧರ್ಮಾವತಿ ಎಸ್. ನಾಯಕ, ವಸತಿ ಸಮಿತಿಯ ಭೀಮಣ್ಣ ಉಡುಮಗಲ್, ಸನ್ಮಾನ ಸಮಿತಿಯ ಈರಪ್ಪ ಕೊಂಬಿನ, ಈಶ್ವರ ಹಲಗಿ, ಮೆರವಣಿಗೆ ಸಮಿತಿಯ ಮೂರ್ತಿ ಗೋನವಾರ, ಪುಸ್ತಕ ಮಳಿಗೆಯ ಸಮಿತಿಯ ನರಸಪ್ಪ ಗೋನವಾರ, ಚಂದ್ರಪ್ಪ ಚುಟ್ಕಲ್, ಸ್ಮರಣ ಸಂಚಿಕೆಯ ಡಾ.ಮಲ್ಲಿಕಾರ್ಜುನ, ಶಿವರಾಜ್, ಪಾರ್ಥಾ ಸಿರವಾರ, ಆಂಜನೇಯ ಕಲ್ಲೂರು, ಮಲ್ಲೇಶ್ ಭೈರವ, ಸುಧಾಕರ್ ಬಿಜನಗೆರ, ಜಿಂದಪ್ಪ, ಯಲ್ಲಪ್ಪ ಮರಾಟ ಇನ್ನಿತರರು ಹಾಜರಿದ್ದರು.
