ಮಸ್ಕಿ ತಾಲ್ಲೂಕು ಪಾಮನಕಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆನಂದಗಲ್ ಗ್ರಾಮದಲ್ಲಿ ದಲಿತ ಸಮುದಾಯದ ಮಹಿಳೆಯೊಬ್ಬರ ಶವಸಂಸ್ಕಾರಕ್ಕೆ ಸವರ್ಣೀಯರು ಅಡ್ಡಿಪಡಿಸಿದ ಘಟನೆ ನಡೆದಿದ್ದು ಇದರ ಪರಿಣಾಮವಾಗಿ ಸ್ಥಳದಲ್ಲಿ ಮಾತಿನ ಚಕಮಕಿ ಉಂಟಾದ ಘಟನೆ ನಡೆದಿದೆ.
ಆನಂದಗಲ್ ಗ್ರಾಮದ ದಲಿತ ಕೇರಿಯ ರಂಗಮ್ಮ ಯಲ್ಲಪ್ಪ ರವಿವಾರ ಮೃತಪಟ್ಟಿದ್ದರು. ಸೋಮವಾರ ಶವಸಂಸ್ಕಾರ ಮಾಡಲು ದಲಿತರು ಸಂಬಂಧಿಕರು, ಗ್ರಾಮಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಅದೇ ಗ್ರಾಮದ ರುದ್ರಭೂಮಿ ಪಕ್ಕದ ವ್ಯಕ್ತಿ ಆತನ ಕುಟುಂಬಸ್ಥರು ಸ್ಮಶಾನ ಭೂಮಿ ನಮ್ಮದು, ಅಲ್ಲಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಮೇಲ್ಜಾತಿಯವರು ಅಡ್ಡಿಪಡಿಸಿದಾಗ ವಿವಾದ ಉಂಟಾಗಿದೆ ಎನ್ನಲಾಗಿದೆ.
ಕೂಡಲೇ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಆಗಮಿಸಿ ತಿಳುವಳಿಕೆ ಹೇಳಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದರು ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೋನಿಗೆ ಬಿದ್ದ ಎರಡನೇ ಚಿರತೆ – ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ
ಈ ಬಗ್ಗೆ ಗ್ರಾಮದ ನಿವಾಸಿ ಸಿದ್ದು ಮಾತನಾಡಿ, ತಲೆತಲಾಂತರದಿಂದ ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಎಸ್ ಸಿ ಜನಾಂಗದವರು ಮೃತಪಟ್ಟರೆ ಮಾತ್ರ ಅಡ್ಡಿಪಡಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
