ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿದಾರರು ಸುಮಾರು 40 ರಿಂದ 50 ವರ್ಷಗಳಿಂದ ಫಾರಂ ನಂ: 50, 53, 57 ರಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಕೂಡಲೇ ಜಮೀನುಗಳನ್ನು ತನಿಖೆ ಪರಿಶೀಲನೆ ನಡೆಸಿ ಪಟ್ಟಾ ಕೊಡಬೇಕು ಎಂದು ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ವತಿಯಿಂದ ತಹಶೀಲ್ದಾರ್ ಸುರೇಶ್ ವರ್ಮಾ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಇದುವರಿಗೂ ಸದರಿ ರೈತಾಪಿ ಬಡವರ್ಗದವರಿಗೆ ಭೂಮಿಯ ಪಟ್ಟಾ ಎಂಬುದು ಗಗನ ಕುಸುಮವಾಗಿದೆ. ಭೂಮಿಯ ಪಟ್ಟ ದೊರೆಯುತ್ತದೆಂದು ತಮ್ಮ ಕಚೇರಿಗಳಿಗೆ ಅಲೆದಾಡಿ ರೈತರ ಜೀವಗಳು ಹೋಗಿರುತ್ತವೆ ಕೂಡಲೇ ಜಮೀನುಗಳನ್ನು ತನಿಖೆ ಪರಿಶೀಲನೆ ನಡೆಸಬೇಕು ಎಂದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಭೂಮಿಗಳಾದ ಗೈರಾಣಿ, ಪೋರಂಪೋಕ್, ಖಾರಿಜ್ ಖಾತ ಹಾಗೂ ಕರ್ನಾಟಕ ಸರ್ಕಾರ ಇನ್ನಿತರ ಹೆಸರಿನಲ್ಲಿರುವ ಸರ್ಕಾರಿ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಇದ್ದಾರೆ. ಹಲವಾರು ಬಾರಿ ತಾಲೂಕು ಆಡಳಿತಕ್ಕೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿರುತ್ತಾರೆ. ಆದರೆ ಇದುವರೆಗೂ ಯಾವುದೇ ಕ್ರಮವನ್ನು ವಹಿಸಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಸಚಿವರು ಕೃಷ್ಣ ಬೈರೇಗೌಡ ಕಳೆದ ದಿನಗಳ ಹಿಂದೆ ಬಡವರ ಮತ್ತು ಭೂ ಸಮಸ್ಯೆಗಳನ್ನು ಆದ್ಯತೆಯಾಗಿ ತೆಗೆದುಕೊಂದು ನವೆಂಬರ್ 25ರ ಒಳಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಆದೇಶಿಸಿದ್ದಾರೆ. ಕೂಡಲೇ ಈ ಅರ್ಜಿ ಸಲ್ಲಿರುವ ಎಲ್ಲಾ ರೈತ ಜಮೀನುಗಳನ್ನು ತನಿಖೆ ಮತ್ತು ಜಿ.ಪಿ.ಎಸ್. ಪರಿಶೀಲನೆ ಮಾಡಬೇಕೆಂದು ಈ ಮೂಲಕ ಭೂಮಿ ಮತ್ತು ವಸತಿ ಹೋರಾಟ ಸಮಿತಿಯು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಡಿ.3-4ರಂದು ‘ಬಹುಸಂಸ್ಕೃತಿ ಉತ್ಸವ’: ಲಾಂಛನ ಬಿಡುಗಡೆ
ಈ ವೇಳೆ ಕರ್ನಾಟಕ ಜನಶಕ್ತಿ ಮುಖಂಡ ಮಾರೆಪ್ಪ ಹರವಿ , ಭೂಮಿ ವಸತಿ ಹೋರಾಟಗಾರ ಆಂಜನೇಯ ಕುರುಬ ದೊಡ್ಡಿ , ರಂಗಾರೆಡ್ಡಿ ,ಹನುಮಂತ ಜೋಗಿ , ಬಂಗಾರಿ ನರಸಿಂಹಲು ಇನ್ನಿತರರು ಹಾಜರಿದ್ದರು.
