ಮಾನ್ವಿ ತಾಲೂಕಿನಲ್ಲಿ ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ದುರುಗಪ್ಪ ತಡಕಲ್ ಒತ್ತಾಯಿಸಿದರು.
ಪಟ್ಟಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಒತ್ತಾಯಿಸಿ ಫೆ.28ರಂದು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ತಹಶೀಲ್ದಾರ್ ಅವರು ಒಂದು ವಾರದೊಳಗೆ ಖರೀದಿ ಕೇಂದ್ರಗಳ ಆರಂಭಕ್ಕೆ ನೀಡಿದ್ದ ಭರವಸೆ ಈಡೇರಿಸಿಲ್ಲ. ಈ ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು” ಎಂದು ಮನವಿ ಮಾಡಿದರು.
ರೈತರು ಜೋಳ ಕಟಾವು ಮುಗಿಸಿ ಎರಡು ತಿಂಗಳು ಗತಿಸಿವೆ. ಆದರೆ ಖರೀದಿ ಕೇಂದ್ರಗಳು ಪ್ರಾರಂಭವಾಗದ ಕಾರಣ ತಾಲೂಕಿನ ಜೋಳ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ದೋತರಬಂಡಿ ಗ್ರಾಮದ ನೂರಾರು ರೈತರ ಜೋಳದ ಬೆಳೆಯ ಜಿಪಿಎಸ್ ಮಾಡಿದ ನಂತರ ಗ್ರಾಮ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಹಿರೇಮಠ ಅನುಮೋದನೆ ನೀಡದೆ ಕರ್ತವ್ಯಲೋಪ ಎಸಗಿದ್ದಾರೆ. ಕೂಡಲೇ ಕರ್ತವ್ಯದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ರಾಯಚೂರು | ವಸತಿ ನಿಲಯಗಳ ಸಿಬ್ಬಂದಿಗಳ ಬಾಕಿ ವೇತನ ಪಾವತಿಗೆ ಆಗ್ರಹ
ಈ ವೇಳೆ ರೈತ ಮುಖಂಡರಾದ ಹನುಮೇಶ ನಾಯಕ ಜೀನೂರು, ಮಹೇಂದ್ರ ಯಾಪಲಪರ್ವಿ, ಶಿವಕುಮಾರ್ ತಡಕಲ್,
ಮಹಾದೇವ್ ತಡಕಲ್ ಉಪಸ್ಥಿತರಿದ್ದರು.
