ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಟಿಪ್ಪು ಸುಲ್ತಾನ ವೃತ್ತದಲ್ಲಿರುವ ಟಿಪ್ಪುಸುಲ್ತಾನ್ ನಾಮ ಫಲಕಕ್ಕೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸಿರವಾರ ಪಟ್ಟಣದ ಮಟನ್ ಮಾರ್ಕೆಟ್ ಹತ್ತಿರ ವಿರುವ ಸ್ವಾತಂತ್ರ್ಯ ಹೋರಾಟಗಾರ ಹಜರತ್ ಟಿಪ್ಪು ಸುಲ್ತಾ ನ್ ವೃತ್ತದಲ್ಲಿರುವ ನಾಮಫಲಕಕ್ಕೆ ಕೆಲ ಕಿಡಿಗೇಡಿಗಳು ಮನುವಾದಿಗಳು ಜಾತಿ ವೈಷಮ್ಯದ ಕಿಡಿ ಹಚ್ಚುವ ಉದ್ದೇಶದಿಂದ ಟಿಪ್ಪು ಸುಲ್ತಾನರ ನಾಮ ಫಲಕಕ್ಕೆ ಅವಮಾನ ಮಾಡಿರುವುದನ್ನು ಪ್ರತಿಭಟನಾ ಕಾರರು ಖಂಡಿಸಿದರು.
ಕೃತ್ಯವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮವನ್ನು ಜರುಗಿಸಬೇಕು, ನಾಯಕರಿಗೆ ಅವಮಾನದಂತ ಘಟನೆಗಳು ಮರುಕಳಿಸ ದಂತೆ, ಕೋಮು ಗಲಬೆಗಳಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲಾಬಳಗದ ರಾಜ್ಯ ಸಂಚಾ ಲಕ ಹನುಮೇಶ ಅರೋಲಿ, ಜಿಲ್ಲಾ ಸಂಚಾಲಕ ಫಕ್ರುದ್ದೀನ್ ಅಲಿ ಅಹ್ಮದ್, ಜಿಲ್ಲಾ ಸಂಚಾಲಕ ಎಸ್. ನರಸಿಂಹಲು, ಜಿ.ನರಸಿಂಹ, ಶಾಂತ ಮೂರ್ತಿ, ಯೇಸು, ಅನ್ಸಾರ್, ಮಾಸೂಮ್, ವಾಹೀದ್, ಶೇಕ್ ಅಲಿ, ಮಂಜುನಾಥ, ಮಾರ್ಕ್, ಬಾಬಾ, ಖಾಜಾವಲಿ ಸೇರಿದಂತೆ ಅನೇಕರು ಇದ್ದರು.